ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಕ್ಸ್ ಕ್ರೀಡಾಕೂಟ: ಮಹಿಳಾ ಟಿಟಿ ತಂಡಕ್ಕೆ ಕಂಚು

Published 15 ಜೂನ್ 2024, 16:23 IST
Last Updated 15 ಜೂನ್ 2024, 16:23 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮೊದಲ ಪದಕ ಗೆದ್ದಿದೆ. ಪೊಯ್ಮಂಟಿ ಬೈಸ್ಯಾ, ಮೌಮಿತಾ ದತ್ತಾ ಮತ್ತು ಯಾಶಿನಿ ಶಿವಶಂಕರ್ ಅವರನ್ನೊಳಗೊಂಡ ಮಹಿಳಾ ಟೇಬಲ್ ಟೆನಿಸ್ ತಂಡವು ಕಂಚಿನ ಪದಕವನ್ನು ಗೆದ್ದಿದೆ.

ರಷ್ಯಾದ ನಗರದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡ ಚೀನಾ ವಿರುದ್ಧ 1-3 ರಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಮೊದಲ ಗೇಮ್‌ನಲ್ಲಿ ಯಾಶಿನಿ 11-7, 4-11, 11-8, 7-11, 11-2 ರಲ್ಲಿ ಗೆದ್ದರು. ಆದರೆ ಚೀನಾ ಉಳಿದ ಮೂರು ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿಸಿತು. 

ಅನಿರ್ಬನ್ ಘೋಷ್, ಜೀತ್ ಚಂದ್ರ ಮತ್ತು ಸ್ನೇಹಿತ್ ಸುರವಜ್ಜುಲಾ ಅವರನ್ನೊಳಗೊಂಡ ಭಾರತದ ಪುರುಷರ ತಂಡ ಬಹ್ರೇನ್ ವಿರುದ್ಧ 3-1 ಅಂತರದಲ್ಲಿ ಜಯ ಸಾಧಿಸಿ ಐದನೇ ಸ್ಥಾನ ಪಡೆಯಿತು. 

‘ಬ್ರಿಕ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಮಹಿಳಾ ಟೇಬಲ್‌ ಟೆನಿಸ್‌ ತಂಡಕ್ಕೆ ಅಭಿನಂದನೆಗಳು. ಈ ಕೂಟದಲ್ಲಿ ಇದು ನಮ್ಮ ಮೊದಲ ಪದಕವಾಗಿದೆ. ದೇಶ ಹೆಮ್ಮೆಪಡುವಂತೆ ಮಾಡಿದ್ದೀರಿ’ ಎಂದು ನೂತನ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT