ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ರಾಷ್ಟ್ರೀಯ ಕಬಡ್ಡಿ ಟೂರ್ನಿಗೆ ರಾಜ್ಯ ತಂಡದ ಆಯ್ಕೆ 29ರಂದು

Last Updated 26 ಡಿಸೆಂಬರ್ 2021, 13:05 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಜನವರಿ 16ರಿಂದ ನಡೆಯಲಿರುವ ಮಹಿಳೆಯರ ರಾಷ್ಟ್ರೀಯ ಕಬಡ್ಡಿ ಟೂರ್ನಿಗೆ ರಾಜ್ಯ ತಂಡದ ಆಯ್ಕೆ ಇದೇ 29ರಂದು ಯಶವಂತಪುರದ ಸುಬೇದಾರ್ ಪಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ.

ಆಯ್ಕೆ ಬಯಸುವವರಿಗೆ ವಯಸ್ಸಿನ ಮಿತಿ ಇಲ್ಲ. ಅದರೆ ತೂಕ 75 ಕೆ.ಜಿ ಒಳಗೆ ಇರಬೇಕು. ಆಧಾರ್ ಕಾರ್ಡ್‌ನ ಮೂಲ, ಪಾಸ್‌ ಪೋರ್ಟ್ ಅಳತೆಯ ನಾಲ್ಕು ಭಾವಚಿತ್ರ ಜೊತೆಗೆ ತರಬೇಕು. ಮ್ಯಾಟ್‌ ಶೂ ಹೊಂದಿರಬೇಕು. ಮಾಹಿತಿಗೆ 9945633003 ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಯ ಆಡಳಿತಾಧಿಕಾರಿ ಎಸ್‌.ಸಿ.ಮಂಜುನಾಥ ಸಿಂಗ್ ತಿಳಿಸಿದ್ದಾರೆ.

ಆಡಳಿತವಿಲ್ಲದೆ ಗೊಂದಲ

ಅಮೆಚೂರ್ ಕಬಡ್ಡಿ ಸಂಸ್ಥೆಯ ಚುನಾವಣೆ ಡಿಸೆಂಬರ್ ಏಳರಂದು ನಡೆದಿತ್ತು. ಆದರೆ ಫಲಿತಾಂಶ ಪ್ರಕಟಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಈಗಲೂ ಸಂಸ್ಥೆ ಆಡಳಿತಾಧಿಕಾರಿಯ ಮೇಲ್ನೋಟದಲ್ಲಿದೆ. ಹೀಗಾಗಿ ತಂಡದ ಆಯ್ಕೆಗೆ ಸಂಬಂಧಿಸಿ ಗೊಂದಲವುಂಟಾಗಿತ್ತು.

’ಜನವರಿ 12ರ ಒಳಗೆ ಆಯ್ಕೆಯಾದ ಆಟಗಾರ್ತಿಯರ ಪಟ್ಟಿಯನ್ನು ಒದಗಿಸುವಂತೆ ಭಾರತ ಅಮೆಚೂರ್ ಕಬಡ್ಡಿ ಫೆಡರೇಷನ್‌ನ ಸಹಾಯಕ ಕಾರ್ಯದರ್ಶಿ ಸೂಚಿಸಿದ್ದರು. ಆದರೆ ಪದಾಧಿಕಾರಿಗಳು ಇಲ್ಲದೇ ಇದ್ದುದರಿಂದ ಆಯ್ಕೆ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲು ಆಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಭಾರತ ಕ್ರೀಡಾ ಸಮಿತಿಯ ಸದಸ್ಯ ಸಿ.ಹೊನ್ನಪ್ಪಗೌಡ ಅವರು ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕೋರಿದ್ದರು’ ಎಂದು ಮಂಜುನಾಥ ಸಿಂಗ್ ತಿಳಿಸಿದ್ದಾರೆ.

‘ಅವರ ಮನವಿಯ ಮೇರೆಗೆ ಚಾಂಪಿಯನ್‌ಷಿಪ್‌ಗೆ ಕಬಡ್ಡಿಪಟುಗಳನ್ನು ಆಯ್ಕೆ ಮಾಡಿ ಕಳುಹಿಸಲು ನಿರ್ಧರಿಸಲಾಗಿದೆ’ ಎಂದು ಮಂಜುನಾಥ ಸಿಂಗ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT