ಅಮ್ಮಾನ್ (ಜೋರ್ಡಾನ್): ಇಲ್ಲಿ ನಡೆಯುತ್ತಿರುವ ವಿಶ್ವ 17 ವರ್ಷದೊಳಗಿನವರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿಗಳ ಪ್ರಾಬಲ್ಯ ಮುಂದುವರಿದಿದೆ. ಶುಕ್ರವಾರ 69 ಕೆಜಿ ವಿಭಾಗದಲ್ಲಿ ಕಾಜಲ್ ಚಿನ್ನ ಗೆದ್ದರು.

ಫೈನಲ್‌ನಲ್ಲಿ ಕಾಜಲ್ 9–2ರಿಂದ ಉಕ್ರೇನ್‌ನ ಒಲೆಕ್ಸಾಂಡ್ರಾ ರೈಬಾಕ್ ಅವರನ್ನು ಮಣಿಸಿದರು. ಈ ಮೂಲಕ ಟೂರ್ನಿಯಲ್ಲಿ ಚಿನ್ನ ಗೆದ್ದ ಐದನೇ ಮಹಿಳಾ ಕುಸ್ತಿಪಟು ಎನಿಸಿಕೊಂಡರು.

ಭಾರತದ ಮತ್ತೊಬ್ಬ ಸ್ಪರ್ಧಿ ಶ್ರುತಿಕಾ (46 ಕೆಜಿ) ಬೆಳ್ಳಿಗೆ ತೃಪ್ತಿಪಟ್ಟರು. ಅವರು ಫೈನಲ್‌ನಲ್ಲಿ ಜಪಾನ್‌ನ ಯುಯು ಕಟ್ಸುಮೆ ಅವರಿಗೆ ಮಣಿದರು. ರಾಜ್ ಬಾಲಾ (40 ಕೆಜಿ) ಮತ್ತು ಮುಸ್ಕಾನ್ (53 ಕೆಜಿ) ಕಂಚಿನ ಪದಕ ಗೆದ್ದರು.

ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟುಗಳು ಶುಕ್ರವಾರ ನಿರಾಸೆ ಮೂಡಿಸಿದರು. ಐದು ಸ್ಪರ್ಧೆಗಳಲ್ಲಿ ಯಾರಿಗೂ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ.

ಅದಿತಿ ಕುಮಾರಿ (43 ಕೆಜಿ), ನೇಹಾ (57 ಕೆಜಿ), ಪುಲ್ಕಿತ್ (65 ಕೆಜಿ) ಮತ್ತು ಮಾನ್ಸಿ ಲಾಥರ್ (73 ಕೆಜಿ) ಗುರುವಾರ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.