ಜಕಾರ್ತಾ: ಭಾರತದ ಕಿರಣ್ ಜಾರ್ಜ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲಿ ಮಂಗಳವಾರ ಎರಡು ಗೆಲುವು ಸಾಧಿಸಿ ಪ್ರಧಾನ ಸುತ್ತು ಪ್ರವೇಶಿಸಿದ್ದಾರೆ.

ಕೊಚ್ಚಿಯ 23 ವರ್ಷದ ಆಟಗಾರ, ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಇಂಡೊನೇಷ್ಯಾದ ಶೆಸರ್ ಹಿರೆನ್ ರುಸ್ಟಾವಿಟೊ ವಿರುದ್ಧ 21-17, 12-21, 21-15 ರಿಂದ ಮತ್ತು ಫ್ರಾನ್ಸ್‌ನ ಅಲೆಕ್ಸ್ ಲೇನಿಯರ್ ಅವರ ವಿರುದ್ಧ 12-21, 21-18, 22-20 ಅಂತರದಿಂದ ಜಯಗಳಿಸಿದರು.

ಪ್ರಧಾನ ಸುತ್ತಿನಲ್ಲಿ ಭಾರತದ ಎಚ್.ಎಸ್.ಪ್ರಣಯ್ ಅವರು ಮಾಜಿ ವಿಶ್ವ ಚಾಂಪಿಯನ್ ಸಿಂಗಪುರದ ಲೋಹ್ ಕೀನ್ ಯೂ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಲಕ್ಷ್ಯ ಸೆನ್ ಅವರು ಮೊದಲ ಸುತ್ತಿನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ ಸೆಣಸಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 25ನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್ ಅವರು ಮಲೇಷ್ಯಾದ ಲೀ ಜಿ ಜಿಯಾ ಹಾಗೂ 30ನೇ ಸ್ಥಾನದಲ್ಲಿರುವ ಪ್ರಿಯಾಂಶು ರಾಜಾವತ್ ಅವರು ಡೆನ್ಮಾರ್ಕ್‌ನ ರಾಸ್ಮಸ್ ಜೆಮ್ಕೆ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.