ಡಬಲ್ಸ್ ವಿಭಾಗಗಳಲ್ಲೂ ಭಾರತಕ್ಕೆ ನಿರಾಸೆ ಕಾದಿತ್ತು. ಮಿಶ್ರ ಡಬಲ್ಸ್ನಲ್ಲಿ ಕಣಕ್ಕಿಳಿದಿದ್ದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಅಶ್ವಿನಿ ಪೊನ್ನಪ್ಪ ವೀರೋಚಿತ ಹೋರಾಟದಲ್ಲಿ 17-21, 21-14, 11-21ರಿಂದ ಚೀನಾದ ಫೆಂಗ್ ಯಾನ್ ಜೆ– ಡು ಯೆ ಎದುರು ಸೋತರು. ಮಹಿಳಾ ಡಬಲ್ಸ್ನಲ್ಲಿ ಮೇಘನಾ ಜಕ್ಕಂಪುಡಿ–ಪೂರ್ವಿಶಾ ಎಸ್. ರಾಮ್ 8-21, 7-21ರಿಂದ ಇಂಡೊನೇಷ್ಯಾದ ನೀತಾ ವಿಯೋಲಿನಾ ಮಾರ್ವಾ ಮತ್ತು ಪೂತ್ರಿ ಸಿಯಾಕಾ ಎದುರು ಮಣಿದರು.