ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಲಿಂಪಿಕ್ಸ್‌ ಅರ್ಹತೆ ಗಳಿಸುವತ್ತ ಮಾನಸಿ ಕಣ್ಣು

Last Updated 30 ಆಗಸ್ಟ್ 2019, 16:19 IST
ಅಕ್ಷರ ಗಾತ್ರ

ಮುಂಬೈ: ಮುಂದಿನ ವರ್ಷ ಟೊಕಿಯೊದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ವಿಶ್ವ ಡಬಲ್ಸ್‌ನಲ್ಲಿ ಅರ್ಹತೆ ಗಳಿಸುವತ್ತ ಭಾರತದ ಮಾನಸಿ ಜೋಶಿ ಚಿತ್ತ ನೆಟ್ಟಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನಲ್ಲಿ ಈಚೆಗೆ ನಡೆದಿದ್ದ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಾನಸಿ ಜೋಶಿ ಚಿನ್ನ ಗೆದ್ದಿದ್ದರು. ಗುರುವಾರ ಅವರು ಮಿಶ್ರ ಡಬಲ್ಸ್‌ನಲ್ಲಿ ಮಿಂಚುವತ್ತ ಗಮನ ನೆಟ್ಟಿದ್ದಾರೆ.

‘ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ವಿಭಾಗದವರ ಸಿಂಗಲ್ಸ್‌ ಸ್ಪರ್ಧೆ ಇಲ್ಲ. ರಾಕೇಶ್ ಪಾಂಡೆ ಅವರೊಂದಿಗೆ ನಾನು ವಿಶ್ವ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದೇನೆ. ಪಾಂಡೆ ಅವರು 13ನೇ ರ‍್ಯಾಂಕ್ ಹೊಂದಿದ್ದಾರೆ. ಪ್ಯಾರಾಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ನಮ್ಮ ಜೋಡಿಯು ಅಗ್ರ ಆರರಲ್ಲಿ ಸ್ಥಾನ ಪಡೆದುಕೊಂಡರೆ ಅರ್ಹತೆ ಪಡೆಯಬಹುದು. ಇಂಡೋನೆಷ್ಯಾ, ಥಾಯ್ಲೆಂಡ್, ಜಪಾನ್ ಮತ್ತು ಜರ್ಮನಿಯ ಆಟಗಾರರನ್ನು ಎದುರಿಸುವುದು ಕಠಿಣ ಸವಾಲು’ ಎಂದು ಮಾನಸಿ ಹೇಳಿದ್ದಾರೆ.

ಹೈದರಾಬಾದಿನ ಪುಲ್ಲೇಲ ಗೋಪಿಚಂದ್ ಅವರ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT