ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದುಹೋದ ಬ್ಯಾಗೇಜ್ ಮರಳಿ ಮಣಿಕಾ ಬಾತ್ರಾ ಕೈಗೆ

Published 9 ಆಗಸ್ಟ್ 2023, 12:53 IST
Last Updated 9 ಆಗಸ್ಟ್ 2023, 12:53 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಟೇಬಲ್‌ ಟೆನಿಸ್‌ ತಾರೆ ಮಣಿಕಾ ಬಾತ್ರಾ ಅವರು ವಿಮಾನ ಪ್ರಯಾಣದ ಸಂದರ್ಭದಲ್ಲಿ ಕಳೆದುಕೊಂಡಿದ್ದ ಬ್ಯಾಗೇಜ್‌ ಪತ್ತೆಯಾಗಿದೆ. ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಅವರು ಕ್ಷಿಪ್ರಗತಿಯಲ್ಲಿ ಸ್ಪಂದಿಸಿದ್ದಕ್ಕೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಚಿವಾಲಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಜಾಲತಾಣ ‘ಎಕ್ಸ್‌’ನಲ್ಲಿ (ಈ ಮೊದಲು ಟ್ವಿಟರ್‌) ಅವರು ಬರೆದುಕೊಂಡಿದ್ದಾರೆ. ಅವರು ಪೆರು ದೇಶದಲ್ಲಿ ನಡೆದ ಟೂರ್ನಿಯಲ್ಲಿ ಭಾಗವಹಿಸಿ ಕೆಎಲ್‌ಎಂ ವಿಮಾನದಲ್ಲಿ ತವರಿಗೆ ಬರುತ್ತಿದ್ದಾಗ ಕ್ರೀಡಾಪರಿಕರಗಳನ್ನು ಹೊಂದಿದ್ದ ಬ್ಯಾಗೇಜ್‌ ಕಳವಾಗಿತ್ತು. ಪತ್ತೆ ಮಾಡಿಕೊಡುವಂತೆ ಅವರು ಸರ್ಕಾರದ ನೆರವು ಕೇಳಿದ್ದರು. ‘ನನ್ನ ಬ್ಯಾಗೇಜ್‌ ಮರಳಿ ಪಡೆಯಲು ನೆರವಾಗಿದ್ದಕ್ಕೆ ಮತ್ತು ಬೇಗನೇ ಸ್ಪಂದಿಸಿದ್ದಕ್ಕೆ ಧನ್ಯವಾದಗಳು. ಬ್ಯಾಗೇಜ್‌ ಇವತ್ತು ಬೆಳಿಗ್ಗೆ ಕೈಸೇರಿದೆ’ ಎಂದು ಬರೆದಿದ್ದಾರೆ.

ಬ್ಯಾಗ್‌ ಕಳೆದುಕೊಂಡಿರುವುದು ಗಮನಕ್ಕೆ ಬಂದ ತಕ್ಷಣ ಮಣಿಕಾ ಈ ಬಗ್ಗೆ ‘ಎಕ್ಸ್‌’ ಮಾಡಿ ‘ಸಿಂಧಿಯಾ ಸರ್‌ ನೆರವಾಗಿ’ ಎಂದು ಕೇಳಿದ್ದರು.

ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ ಮಣಿಕಾ 35ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT