ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ತರಬೇತಿ: ಟೇಬಲ್ ಟೆನಿಸ್‌ ಆಟಗಾರ್ತಿ ದಿಯಾ, ಸ್ವಸ್ತಿಕಾಗೆ ಸಮ್ಮತಿ

Published 19 ಫೆಬ್ರುವರಿ 2024, 13:10 IST
Last Updated 19 ಫೆಬ್ರುವರಿ 2024, 13:10 IST
ಅಕ್ಷರ ಗಾತ್ರ

ನವದೆಹಲಿ: ಟೇಬಲ್ ಟೆನಿಸ್‌ ಆಟಗಾರ್ತಿಯರಾದ ದಿಯಾ ಚಿತಾಳೆ ಮತ್ತು ಸ್ವಸ್ತಿಕಾ ಘೋಷ್ ಅವರಿಗೆ ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿ ಉನ್ನತ ಮಟ್ಟದ ತರಬೇತಿ ಪಡೆಯಲು ಕ್ರೀಡಾ ಸಚಿವಾಲಯದ ಮಿಷನ್ ಒಲಿಂಪಿಕ್ ಸೆಲ್ ಅನುಮತಿ ನೀಡಿದೆ.

ದಿಯಾ ಅವರು ದಕ್ಷಿಣ ಕೊರಿಯಾದ ಪಾಜು–ಸಿ ನಗರದಲ್ಲಿ ಶಿನ್ ಮಿನ್ ಸುಂಗ್ ಅವರಿಂದ ತರಬೇತಿ ಪಡೆಯಲಿದ್ದಾರೆ. ಸ್ವಸ್ತಿಕಾ ಅವರು ಜಪಾನ್‌ನ ಒಸಾಕಾದಲ್ಲಿ ಕ್ವಿ ಜಿಯಾಣ್ ಷಿನ್ ಅವರಿಂದ ತರಬೇತಿ ಪಡೆಯಲಿದ್ದಾರೆ.

ಶಿನ್ ಮಿನ್ ಸಂಗ್ ಅವರ ಬಳಿ ತರಬೇತಿ ಪಡೆಯಲು ದಿಯಾ ಅವರು ದಕ್ಷಿಣ ಕೊರಿಯಾದ ಪಜು-ಸಿಗೆ ತೆರಳಿದರೆ, ಸ್ವಸ್ತಿಕಾ ಜಪಾನ್‌ನ ಒಸಾಕಾದಲ್ಲಿ ಕಿಯು ಜಿಯಾನ್ ಕ್ಸಿನ್ ಅವರಿಂದ ತರಬೇತಿ ಪಡೆಯಲಿದ್ದಾರೆ..

ಬ್ಯಾಡ್ಮಿಂಟನ್‌ ಆಟಗಾರರಾದ ಕಿರಣ್ ಜಾರ್ಜ್ ಮತ್ತು ಅನುಪಮಾ ಉಪಾಧ್ಯಾಯ, ಮಹಿಳಾ ಡಬಲ್ಸ್ ತಂಡದ ತ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಮತ್ತು ಶೂಟರ್ ರುದ್ರಾಂಕ್ಷ್ ಪಾಟೀಲ್ ಅವರಿಗೆ ಹೊರದೇಶಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೂ ಸಚಿವಾಲಯ ಅನುಮೋದನೆ ನೀಡಿದೆ.

ಕಿರಣ್ ಮತ್ತು ಅನುಪಮಾ ಬಿಡಬ್ಲ್ಯುಎಫ್‌ ಓರ್ಲೀನ್ಸ್‌ ಮಾಸ್ಟರ್ಸ್‌ನಲ್ಲಿ ಭಾಗವಹಿಸಿದರೆ, ತ್ರಿಸಾ ಮತ್ತು ಗಾಯತ್ರಿ ಜೋಡಿ ತಮ್ಮ ತರಬೇತುದಾರ ಮತ್ತು ಫಿಸಿಯೋ ಅವರೊಂದಿಗೆ ಬಿಡಬ್ಲ್ಯುಎಫ್ ಜರ್ಮನ್ ಓಪನ್‌ನಲ್ಲಿ ಸ್ಪರ್ಧಿಸಲು ಜರ್ಮನಿಗೆ ತೆರಳಲಿದ್ದಾರೆ.

ಭಾರತದ ಪ್ರಮುಖ ರೈಫಲ್ ಶೂಟರ್ ರುದ್ರಾಂಕ್ಷ್ ಅವರು ಜರ್ಮನಿಯ ಡಾರ್ಟ್‌ಮಂಡ್‌ನಲ್ಲಿ ನಡೆಯುವ ಐಎಸ್‌ಎಎಸ್‌ ಟೂರ್ನಿಯಲ್ಲಿ ಭಾಗವಹಿಸಲು  ತೆರಳಲಿದ್ದಾರೆ.

ಡಬ್ಲ್ಯುಟಿಟಿ ಫೀಡರ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸತ್ಯನ್ ಜ್ಞಾನಶೇಖರನ್ ಮತ್ತು ಮಣಿಕಾ ಬಾತ್ರಾ ಅವರಿಗೆ ಕೋಚ್‌ ಜೊತೆ ತೆರಳುವುದಕ್ಕೂ ಅನುಮತಿ ನೀಡಲಾಗಿದೆ. ಸತ್ಯನ್ ಅವರು ಲೆಬಬಾನ್‌ನ ಬೇರೂತ್‌ನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದಾರೆ. ಮಣಿಕಾ ತಮ್ಮ ಕೋಚ್‌ ಜೊತೆ ಸಿಂಗಪುರ ಮತ್ತು ನಂತರ ಬೇರೂತ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಟಿ ಫೀಡರ್‌ ಟೂರ್ನಿಗಳಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT