ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯ್‌ ಅನುದಾನ, ಪ್ರೋತ್ಸಾಹಧನಕ್ಕೆ ಕತ್ತರಿ

ಕೇಂದ್ರ ಬಜೆಟ್‌: ಕ್ರೀಡಾ ಕ್ಷೇತ್ರಕ್ಕೆ ಒಟ್ಟು ₹ 2826.92 ಕೋಟಿ; ಖೇಲೊ ಇಂಡಿಯಾ ಅನುದಾನ ಹೆಚ್ಚಳ
Last Updated 1 ಫೆಬ್ರುವರಿ 2020, 19:28 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಖೇಲೊ ಇಂಡಿಯಾ ಯೋಜನೆಗೆ ನೀಡುವ ಅನುದಾನವನ್ನು ಹೆಚ್ಚಿಸುವುದಕ್ಕಾಗಿ ಕ್ರೀಡಾಪಟುಗಳ ಪ್ರೋತ್ಸಾಹಧನ ಮತ್ತು ಭಾರತ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್‌) ನೀಡುವ ಅನುದಾನಕ್ಕೆ ಕತ್ತರಿ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಒಟ್ಟು ₹2826.92 ತೆಗೆದಿರಿಸಿದ್ದಾರೆ. ಕಳೆದ ಬಾರಿ ‘ಲೆಕ್ಕ’ ಹಾಕಿದ್ದ ಮೊತ್ತಕ್ಕಿಂತ ₹ 50 ಕೋಟಿಯನ್ನು ಈ ಮೂಲಕ ಹೆಚ್ಚಿಸಿದ್ದಾರೆ. ಖೇಲೊ ಇಂಡಿಯಾ ಯೋಜನೆಗೆ ಕಳೆದ ಬಾರಿಗಿಂತ ₹ 312.42 ಕೋಟಿ ಹೆಚ್ಚಿಸಲು ನಿರ್ಧರಿಸಿದ್ದಾರೆ.

‌ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ನೀಡುವ ಅನುದಾನದಲ್ಲಿ ಅತಿ ಹೆಚ್ಚು ಪ್ರಮಾಣದ ಕಡಿತ ಮಾಡಲಾಗಿದೆ. ಫೆಡರೇಷನ್‌ಗೆ ಕಳೆದ ಬಾರಿಗಿಂತ ₹ 55 ಕೋಟಿಯನ್ನು ಕಡಿತಗೊಳಿಸಲಾಗಿದೆ. ಕ್ರೀಡಾಪಟುಗಳಪ್ರೋತ್ಸಾಹಧನ ಮತ್ತು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯಲ್ಲೂ ಭಾರಿ ಕಡಿತ ಮಾಡಲಾಗಿದೆ. ಸಾಯ್‌ಗೆ ಕಳೆದ ಬಾರಿಗಿಂತ ₹ 115 ಕೋಟಿ ಕಡಿಮೆ ಅನುದಾನ ನೀಡಲಾಗಿದೆ. 2010ರ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದ ಕ್ರೀಡಾಂಗಣದ ದುರಸ್ತಿಯ ಮೊತ್ತಕ್ಕೂ ಕತ್ತರಿ ಬಿದ್ದಿದೆ.

ಕ್ರೀಡಾಪಟುಗಳ ರಾಷ್ಟ್ರೀಯ ಕ್ಷೇಮಾಭಿವೃದ್ಧಿ ನಿಧಿ ಮತ್ತು ಜಮ್ಮು–ಕಾಶ್ಮೀರ ಕ್ರೀಡಾ ಅಭಿವೃದ್ಧಿಗೆ ತೆಗೆದಿರಿಸಿದ ಮೊತ್ತದಲ್ಲಿ ಬದಲಾವಣೆ ಇಲ್ಲ. ಲಕ್ಷ್ಮಿಬಾಯಿ ರಾಷ್ಟ್ರೀಯ ಸಂಸ್ಥೆಯ ಅನುದಾನ ಹೆಚ್ಚಿಸಲಾಗಿದೆ. 2019–20ರ ಅವಧಿಯಲ್ಲಿ ಕ್ರೀಡೆಗೆ ₹ 2216.92 ಕೋಟಿಯನ್ನು ತೆಗೆದಿರಿಸಲಾಗಿತ್ತು. ನಂತರ ಅದನ್ನು ₹ 2776.92 ಕೋಟಿಗೆ ಇಳಿಸಲಾಗಿತ್ತು.

ಕ್ರೀಡಾ ಕ್ಷೇತ್ರಕ್ಕೆ ಈ ಬಾರಿ ಸಿಕ್ಕಿದ್ದು (ಮೊತ್ತ ಕೋಟಿ ₹ಗಳಲ್ಲಿ)

ವಿಭಾಗ;ಕಳೆದ ಬಾರಿ;ಈ ಬಾರಿ

ಖೇಲೊ ಇಂಡಿಯಾ;578;890.42

ಕ್ರೀಡಾ ಫೆಡರೇಷನ್‌;300.85;245

ಪ್ರೋತ್ಸಾಹಧನ;111;70

ಕ್ರೀಡಾಭಿವೃದ್ಧಿ ನಿಧಿ;77.15;50

ಕ್ರೀಡಾ ಪ್ರಾಧಿಕಾರ;615;500

ಕಾಮನ್‌ವೆಲ್ತ್ ಕ್ರೀಡಾಂಗಣ;96;75

ಕ್ಷೇಮಾಭಿವೃದ್ಧಿ ನಿಧಿ;2;2

ಲಕ್ಷ್ಮಿಬಾಯಿ ಸಂಸ್ಥೆ;50;55

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT