ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಪರಿಸರದಲ್ಲಿ ಮೋಟಾರ್‌ ರೇಸ್‌ ರೋಮಾಂಚನ

Last Updated 31 ಜನವರಿ 2021, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ‘ಮೋಟಾರ್‌ ಸ್ಪೋರ್ಟ್ಸ್‌ ಅಕಾಡೆಮಿ ಆಫ್‌ ವಿಜಯನಗರ’ ಸಂಸ್ಥೆಯು ನಗರ ಹೊರವಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ಹಂಪಿ ಮೋಟಾರ್‌ ಸ್ಪೋರ್ಟ್ಸ್‌ ರೇಸ್‌’ನಲ್ಲಿ ಸವಾರರು ಅಂಕು ಡೊಂಕಾದ ರಸ್ತೆಗಳಲ್ಲಿ ಬೈಕ್‌ ಓಡಿಸಿ ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿದರು.

ಮೈನವಿರೇಳಿಸುವ ಸಾಹಸಕ್ಕೆ ಅನೇಕ ಜನ ಸಾಕ್ಷಿಯಾದರು. ಕರತಾಡನ, ಶಿಳ್ಳೆ ಮೂಲಕ ಅವರನ್ನು ಹುರಿದುಂಬಿಸಿದರು. ವಾಹನಗಳ ಆರ್ಭಟಕ್ಕೆ ಇಡೀ ಪರಿಸರದಲ್ಲಿ ಕೆಂಧೂಳಿ ಎದ್ದಿತ್ತು.

ಕ್ಲಾಸ್‌ 1–ಸೂಪರ್‌ ಬೈಕ್‌ ಪ್ರೊ–ಎಕ್ಸ್‌ಪರ್ಟ್‌ ವಿಭಾಗದಲ್ಲಿ ಹೊಸೂರಿನ ಆರ್‌.ಇ. ರಾಜೇಂದ್ರ ಉತ್ತಮ ಸಾಧನೆ ತೋರಿ ಬಹುಮಾನ ಗಳಿಸಿದರು. ಇದೇ ವಿಭಾಗದ ಕ್ಲಾಸ್‌1–ಎ ನಲ್ಲಿ ಚಿಕ್ಕಮಗಳೂರಿನ ಅಸಾದ ಖಾನ್‌, ಕ್ಲಾಸ್‌2–ಸೂಪರ್‌ ಸ್ಪೋರ್ಟ್‌ 130ಯಲ್ಲಿ ಬೆಂಗಳೂರಿನ ಎ. ವರುಣ ಕುಮಾರ್‌, ಕ್ಲಾಸ್‌3 ಸೂಪರ್‌ ಸ್ಪೋರ್ಟ್‌ 165 ವಿಭಾಗದಲ್ಲಿ ಚಿಕ್ಕಮಗಳೂರಿನ ಪಿ.ವಿ. ಫ್ರಾನ್ಸಿಸ್‌, ಕ್ಲಾಸ್‌4 ಸೂಪರ್‌ ಸ್ಪೋರ್ಟ್‌ 260 ವಿಭಾಗದಲ್ಲಿ ಹೊಸೂರಿನ ಸಾಮ್ಯುವೆಲ್‌ ಜಾಕೊಬ್‌ ಪ್ರಶಸ್ತಿ ಬಾಚಿಕೊಂಡರು.

ಕ್ಲಾಸ್‌5 ಸೂಪರ್‌ ಸ್ಪೋರ್ಟ್‌ 400 ವಿಭಾಗದಲ್ಲಿ ಬೆಂಗಳೂರಿನ ಸಜೀಶ್‌ ರಘುನಾಥನ್‌, ಕ್ಲಾಸ್‌6 ಸೂಪರ್‌ ಸ್ಪೋರ್ಟ್‌ 550ಯಲ್ಲಿ ಬೆಂಗಳೂರಿನ ಎಸ್‌. ಶರತ್‌ ಕುಮಾರ್‌, ಕ್ಲಾಸ್‌7 ಸ್ಕೂಟರ್‌ 210ರಲ್ಲಿ ಹೊಸೂರಿನ ಎನ್. ಕಾರ್ತಿಕ್‌, ಕ್ಲಾಸ್‌8 ಲೇಡಿಸ್‌ ಕ್ಲಾಸ್‌ನಲ್ಲಿ ಬೆಂಗಳೂರಿನ ಎಂ. ಐಶ್ವರ್ಯ ಪಿಸ್ಸೆ ಪ್ರಶಸ್ತಿ ಜಯಿಸಿದರು.

ಕುಶಾಲ ನಗರದ ಆರ್‌.ಎ. ಸ್ಟೀಫೆಂಟ್‌ ರಾಯ್‌ ಅವರು ‘ಸ್ಟಾರ್‌ ಆಫ್‌ ಕರ್ನಾಟಕ’ ಆಗಿ ಹೊರಹೊಮ್ಮಿದರು. 80 ಕಿ.ಮೀ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 53 ಜನ ಪಾಲ್ಗೊಂಡಿದ್ದರು. ಫೆ. 6,7ರಂದು ಆಟೊ ಕ್ರಾಸ್‌ ಕಾರ್‌ ರೇಸ್‌, 4X4 ಆಫ್ ರೋಡ್‌ ಜೀಪ್‌ ಕ್ರಾಸ್‌ ರೇಸ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT