ರಾಂಚಿ: ರೈಲ್ವೇಸ್‌ನ ಅನ್ನು ರಾಣಿ, ಗುರುವಾರ ಆರಂಭವಾದ 59ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಜಾವೆಲಿನ್ ಥ್ರೋ ಸ್ವರ್ಣ ಗೆದ್ದುಕೊಂಡರು.

ದೋಹಾದಲ್ಲಿ ಇತ್ತೀಚೆಗೆ ವಿಶ್ವ ಚಾಂಪಿಯನ್‌ಷಿಪ್ ವೇಳೆ ರಾಷ್ಟ್ರೀಯ ದಾಖಲೆ (62.43 ಮೀ) ಸ್ಥಾಪಿಸಿದ್ದ ಅನ್ನು ಬಿರ್ಸಾ ಮುಂಡಾ ಕ್ರೀಡಾಂಗಣ ದಲ್ಲಿ ತಮ್ಮ ಕೊನೆಯ ಯತ್ನದಲ್ಲಿ 58.60 ಮೀ. ದೂರ ಎಸೆದು ಚಿನ್ನ ಗೆದ್ದರು. ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ‘ತಾರಾ ಸ್ಪರ್ಧಿ’ ನೀರಜ್ ಚೋಪ್ರಾ ಹಿಂದೆ ಸರಿದರು. ಕೋಚ್ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಂಡರು.

ಒಎನ್‌ಜಿಸಿಯ ಸುರೇಶ್ ಕುಮಾರ್, ಪುರುಷರ 10,000 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದುಕೊಂಡರು. 2014ರಲ್ಲಿ ಲಖನೌದಲ್ಲಿ ರಾಷ್ಟ್ರೀಯ ಅಂತರರಾಜ್ಯ ಕೂಟದ ನಂತರ ಇದೇ ಮೊದಲ ಬಾರಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಂತಾಯಿತು. ಏಷ್ಯನ್ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಮುರಳಿ ಕುಮಾರ್ ಗ್ಯಾವಿಟ್ 9ನೇ ಸ್ಥಾನ ಗಳಿಸಿದರು.

ಫಲಿತಾಂಶಗಳು:ಪುರುಷರು: 10,000 ಮೀ. ಓಟ: ಸುರೇಶ್ ಕುಮಾರ್ (ಒಎನ್‌ಜಿಸಿ, 29ನಿ.25.26 ಸೆ.)–1, ರಂಜೀತ್ ಕುಮಾರ್ ಪಟೇಲ್ (ರೈಲ್ವೇಸ್, 29ನಿ.41.35 ಸೆ.)–2, ಬುಗತ ಶ್ರೀನು (ಸರ್ವಿಸಸ್, 30ನಿ.03.50ಸೆ)–3. ಮಹಿಳೆಯರು: ಜಾವೆಲಿನ್: ಅನ್ನುರಾಣಿ (ರೈಲ್ವೇಸ್)–1, ಶರ್ಮಿಳಾ ಕುಮಾರಿ (ರೈಲ್ವೇಸ್)–2, ಪೂನಂ ರಾಣಿ (ಹರಿಯಾಣ)–3, ದೂರ: 58.60 ಮೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.