ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳರಿಪಯಟ್ಟು ಚಾಂಪಿಯನ್‌ಷಿಷ್‌: ಕರ್ನಾಟಕ ತಂಡಕ್ಕೆ ರನ್ನರ್‌ ಅಪ್‌ ಪ್ರಶಸ್ತಿ

Published 20 ಆಗಸ್ಟ್ 2023, 20:47 IST
Last Updated 20 ಆಗಸ್ಟ್ 2023, 20:47 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕಳರಿಪಯಟ್ಟು ಫೆಡರೇಷನ್‌ ಈಚೆಗೆ ಆಯೋಜಿಸಿದ್ದ 15ನೇ ರಾಷ್ಟ್ರೀಯ ಕಳರಿಪಯಟ್ಟು ಚಾಂಪಿಯನ್‌ಷಿಷ್‌ನಲ್ಲಿ ಕರ್ನಾಟಕ ತಂಡವು ರನ್ನರ್‌ ಅಪ್‌ ಪ್ರಶಸ್ತಿ ಪಡೆದುಕೊಂಡಿದೆ.

ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 700ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಸಬ್ ಜೂನಿಯರ್, ಜೂನಿಯರ್, ಮಹಿಳೆ ಮತ್ತು ಪುರುಷ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

ಪುರುಷರ ವಿಭಾಗದ ಕತ್ತಿ ಮತ್ತು ಗುರಾಣಿ ಸ್ಪರ್ಧೆಯಲ್ಲಿ ಕರ್ನಾಟಕದ ಎ.ಎಂ. ಬಿನೀಷ್ ಮತ್ತು ಹರಿನಾಥ್ ಚಿನ್ನ ಗೆದ್ದರು.

ಸಬ್ ಜೂನಿಯರ್ ಬಾಲಕಿಯರ ಮೇಪಯೆಟ್ ವಿಭಾಗದಲ್ಲಿ ಧಾತ್ರಿ ಅವರು ಬೆಳ್ಳಿ ಗೆದ್ದರು. ಜೂನಿಯರ್‌ ಬಾಲಕಿಯರ ವಿಭಾಗದಲ್ಲಿ ರಂಜಿನಿ ಕಂಚಿನ ಪದಕ ಗೆದ್ದರು.

ಪುರುಷರ ನೆಡುವಡಿ ಪಿಯಾಟ್‌ ಸ್ಪರ್ಧೆಯಲ್ಲಿ ಎ.ಎಂ. ಬಿನೀಷ್ ಮತ್ತು ಹರಿನಾಥ್ ಬೆಳ್ಳಿ ಪಡೆದರೆ, ಪಿ. ಅಜಿತ್ ಮತ್ತು ರೋಶನ್ ರೊಮಾರಿಯೊ ಕಂಚು ಗೆದ್ದರು.

ಚುವಟ್ಟು ವಿಭಾಗದಲ್ಲಿ ತಂಕಾ ಸಲ್ವಂ ಮತ್ತು ಪಿ. ಅಜಿತ್ ಕಂಚಿನ ಪದಕ, ಎ.ಎಂ. ಬಿನೀಶ್‌ ಕಂಚು, ಪುರುಷರ ಉರುಮಿ ವೀಸಲ್‌ನಲ್ಲಿ ಸಿ. ಜಿತು ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT