ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಕಾರ್ಟಿಂಗ್‌: 9 ವರ್ಷದ ಅತಿಕಾಗೆ ಮೂರನೇ ಸ್ಥಾನ

Published 9 ಜೂನ್ 2024, 16:33 IST
Last Updated 9 ಜೂನ್ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು: ಕಾಶ್ಮೀರದ 9 ವರ್ಷ ವಯಸ್ಸಿನ ಅತಿಕಾ ಮೀರ್‌, ಭಾನುವಾರ ನಡೆದ ಮೀಕೊ ಎಫ್‌ಎಂಎಸ್‌ಸಿಐ ರೋಟಾಕ್ಸ್‌ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ರನ್ನರ್‌ ಅಪ್‌ ಪಡೆದಿದ್ದಾರೆ.

ನಗರದ ಮೀಕೋ ಕಾರ್ಟೋಪಿಯಾ ಟ್ರ್ಯಾಕ್‌ನಲ್ಲಿ ನಡೆದ ರೇಸ್‌ನಲ್ಲಿ ಅತಿಕಾ, ಮೈಕ್ರೋ ಮ್ಯಾಕ್ಸ್‌ ವಿಭಾಗದ (7ರಿಂದ 12 ವರ್ಷ) ಅಂತಿಮ ರೇಸ್‌ನ ಮೊದಲ ಸುತ್ತಿನಲ್ಲಿ 12 ನಿಮಿಷ 21.397 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.

ಚೆನ್ನೈನ ರಿವಾನ್‌ ಪ್ರೀತಂ (12 ನಿ. 16.790 ಸೆ) ಹಾಗೂ ರೆಹಾನ್ ಖಾನ್‌ (12 ನಿ. 19.920 ಸೆ) ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡರು. ಈ ಗೆಲುವಿನೊಂದಿಗೆ ಅತಿಕಾ, ಸತತ ಮೂರು ವಾರಾಂತ್ಯಗಳಲ್ಲಿ ಮೂರು ವಿವಿಧ ವಿಭಾಗಗಳಲ್ಲಿ ಅಗ್ರ 3ರೊಳಗೆ ಸ್ಥಾನ ಗಳಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಶನಿವಾರ ಅರ್ಹತಾ ಸುತ್ತಿನಲ್ಲಿ ಅತಿಕಾ 5ನೇ ಸ್ಥಾನ ಪಡೆದಿದ್ದರು. ಅತಿಕಾ ಯುರೋಪ್‌ಗೆ ತೆರಳಲಿದ್ದು, ಮುಂದಿನ ಕೆಲ ವಾರಗಳ ಕಾಲ ವಿವಿಧ ರೇಸ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಆರಂಭದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ತುಸು ಹಿನ್ನಡೆ ಅನುಭವಿಸಿದರೂ, ನಮ್ಮ ತಂಡ ಎಂ ಸ್ಪೋರ್ಟ್‌ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ನನಗೆ ಉತ್ತಮ ಕಾರ್ಟ್‌ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಫಲಿತಾಂಶ ನನ್ನಲ್ಲಿ ಖುಷಿ ತಂದಿದೆ. ಮುಂದಿನ ಸುತ್ತಿನಲ್ಲಿ ಮತ್ತಷ್ಟು ಉತ್ತಮ ರೀತಿಯ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ’ ಎಂದು ಅತಿಕಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT