ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್: ಮೊದಲ ದಿನ ರಾಜ್ಯಕ್ಕೆ ಏಳು ಪದಕ

Last Updated 19 ಫೆಬ್ರುವರಿ 2021, 22:11 IST
ಅಕ್ಷರ ಗಾತ್ರ

ಗದಗ: ಕರ್ನಾಟಕದ ಸೈಕ್ಲಿಸ್ಟ್‌ಗಳು ಇಲ್ಲಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಶುಕ್ರವಾರ ನಡೆದ 17ನೇ ರಾಷ್ಟ್ರಮಟ್ಟದ ಮೌಂಟೆನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನ ಮೂರು ಚಿನ್ನ ಸೇರಿದಂತೆ ಏಳು ಪದಕಗಳನ್ನು ಗೆದ್ದುಕೊಂಡರು. ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳು ಒಲಿದವು.

ಮೊದಲ ದಿನದ ಫಲಿತಾಂಶಗಳು
14 ವರ್ಷದೊಳಗಿನ ಬಾಲಕರು
10 ಕಿ.ಮೀ. ವೈಯಕ್ತಿಕ ಟೈಮ್‌ಟ್ರಯಲ್ಸ್‌:
ಅದೀಪ್‌ ವಾಘ್‌(ಕಾಲ: 30:21.015, ಮಹಾರಾಷ್ಟ್ರ)–1, ಸಮರ್ಪಣ್‌ ಜೈನ್ (ಕಾಲ: 30:26.282, ಕರ್ನಾಟಕ)–2, ಮಲವ್‌ ದತ್ತ (ಕಾಲ: 31:25.851, ಅಸ್ಸಾಂ)–3.

16 ವರ್ಷದೊಳಗಿನ ವಿಭಾಗ
10 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್ಸ್‌:
ಚರಿತಗೌಡ (ಕಾಲ: 27:31.199, ಕರ್ನಾಟಕ)–1, ಅದ್ವೈತ್‌ ಶಂಕರ್‌ ಎಸ್‌.ಎಸ್‌ (ಕಾಲ: 30:34.014, ಕೇರಳ)–2, ಸುಧಾಂಶು ಲಿಂಬು (ಕಾಲ: 30:35.588, ಪಶ್ಚಿಮ ಬಂಗಾಳ)–3.

18 ವರ್ಷದೊಳಗಿನ ವಿಭಾಗ
18.4 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್ಸ್‌: ಆಡ್ಯುನಿಸ್ ಟಂಗ್ಟು‌ (ಕಾಲ: 53:33.200, ಕರ್ನಾಟಕ)–1, ಹರ್ಷಿತ್‌ ಕೆ.ಜೆ. (ಕಾಲ: 58:07.923, ಕರ್ನಾಟಕ)–2, ರಾಜ್‌ಕುಮಾರ ರಾಯ್‌ (ಕಾಲ: 01:00.58.770, ಪಶ್ಚಿಮ ಬಂಗಾಳ)–3.

ಬಾಲಕಿಯರ ವಿಭಾಗ
14 ವರ್ಷದೊಳಗಿನ 10 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್ಸ್‌:
ಸಿದ್ಧಿ ಸಿರ್ಕೇ (ಕಾಲ: 35:40.863, ಮಹಾರಾಷ್ಟ್ರ)–1, ಶ್ರಾವಣಿ ಪರಿತ್‌ (ಕಾಲ: 38:25.227, ಮಹಾರಾಷ್ಟ್ರ)–2, ಛಾಯಾ ನಾಗಶೆಟ್ಟಿ (ಕಾಲ: 40:18.372;ಕರ್ನಾಟಕ)–3

16 ವರ್ಷದೊಳಗಿನವರ, 10 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ಸ್‌: ಕರೇನ್ ಮಾರ್ಷಲ್‌ (ಕಾಲ: 39:27.930–ಕರ್ನಾಟಕ)–1, ಆಗ್ಸಾ ಆನ್ ಥಾಮಸ್ (ಕಾಲ: 40:27.034, ಕೇರಳ)–2, ಪವಿತ್ರಾ ಕುರ್ತಕೋಟಿ (ಕಾಲ: 41:04.496; ಕರ್ನಾಟಕ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT