ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌: ಪಂಕಜ್‌ ಅಡ್ವಾಣಿಗೆ 22ನೇ ಪ್ರಶಸ್ತಿ

ಬಿಲಿಯರ್ಡ್ಸ್‌: ಬೆಂಗಳೂರು ‘ತಾರೆ’ಯ ಸಾಧನೆ
Last Updated 15 ಸೆಪ್ಟೆಂಬರ್ 2019, 20:18 IST
ಅಕ್ಷರ ಗಾತ್ರ

ಮ್ಯಾಂಡಲೆ, ಮ್ಯಾನ್ಮಾರ್ (ಪಿಟಿಐ): ಬೆಂಗಳೂರಿನ ಬಿಲಿಯರ್ಡ್ಸ್‌ ತಾರೆ ಪಂಕಜ್ ಅಡ್ವಾಣಿ ಭಾನುವಾರ 22ನೇ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡರು.

ಇಲ್ಲಿ ನಡೆದ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 34 ವರ್ಷದ ಪಂಕಜ 6–2ರಿಂದಆತಿಥೇಯ ಮ್ಯಾನ್ಮಾರ್‌ನ ನೇ ಥಾವೇ ವಿರುದ್ಧ ಜಯಿಸಿದರು. 150 ಅಪ್ ಮಾದರಿಯಲ್ಲಿ ಅವರು ಸತತವಾಗಿ ಪ್ರವೇಶಿಸಿದ ನಾಲ್ಕನೇ ಫೈನಲ್ ಇದಾಗಿತ್ತು.

ಪಂಕಜ್ ತಮ್ಮ ಎದುರಾಳಿಯ ಪೈಪೋಟಿಯನ್ನು ಚಾಣಾಕ್ಷತನದಿಂದ ಮೀರಿ ನಿಂತರು. ಅವರು 150–4, 151-66, 150-50, 7-150, 151-69, 150-0, 133-150, 150-75 ಫ್ರೇಮ್‌ಗಳನ್ನು ತಮ್ಮ ಗೆಲುವನ್ನು ಖಚಿತಪಡಿಸಿಕೊಂಡರು. ಹೋದ ಆರು ವರ್ಷಗಳಲ್ಲಿ ಈ ‘ಚುಟುಕು ಮಾದರಿ’ಯಲ್ಲಿ ಇದು ಅವರು ಗೆದ್ದ ಐದನೇ ಪ್ರಶಸ್ತಿಯಾಗಿದೆ.

‘ಅನಿರೀಕ್ಷಿತ ತಿರುವುಗಳು ರೋಚಕತೆ ಹೆಚ್ಚಿಸುವ ಇದು ಆಸಕ್ತಿಕರ ಮಾದರಿಯಾಗಿದೆ. ಹೀಗಾಗಿ ವಿಶೇಷ ಅನುಭವ ನೀಡಿದೆ’ ಎಂದು ಪಂಕಜ್ ಹೇಳಿದರು.

ಅತಿ ಹೆಚ್ಚು ವಿಶ್ವ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನೂ ಪಂಕಜ್ ಬರೆದರು. ಅವರು ಸೋಮವಾರ ಆರಂಭವಾಗಲಿರುವ ಸಿಕ್ಸ್‌ ರೆಡ್ ವಿಶ್ವ ಸ್ನೂಕರ್‌ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT