ಕ್ವಾಲಾಲಂಪುರ: ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಅವರಿಗೆ ಇದೇ ತಿಂಗಳ 26ರಂದು ಪ್ಯಾರಿಸ್ನಲ್ಲಿ ಆರಂಭವಾಗುವ ಒಲಿಂಪಿಕ್ ಕ್ರೀಡೆಗಳ ಗುಂಪು ಹಂತದಲ್ಲಿ ಅಷ್ಟೇನೂ ಪ್ರಬಲ ಸ್ಪರ್ಧಿಗಳು ಎದುರಾಗುತ್ತಿಲ್ಲ. ಶುಕ್ರವಾರ ಬ್ಯಾಡ್ಮಿಂಟನ್ ಸಿಂಗಲ್ಸ್ ‘ಡ್ರಾ’ ಅಂತಿಮಗೊಳಿಸಲಾಗಿದೆ.

ರಿಯೊ ಒಲಿಂಪಿಕ್ಸ್ನಲ್ಲಿ (2016) ಬೆಳ್ಳಿ ಹಾಗೂ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ, 29 ವರ್ಷ ವಯಸ್ಸಿನ ಸಿಂಧು ಅವರಿಗೆ ಹತ್ತನೇ ಶ್ರೇಯಾಂಕ ನೀಡಲಾಗಿದೆ.

ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಸಿಂಧು ‘ಎಂ’ ಗುಂಪಿನಲ್ಲಿದ್ದು, ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ (75ನೇ ಕ್ರಮಾಂಕ), ಮಾಲ್ಟೀವ್ಸ್ನ ಫಾತಿಮತ್ ನಬಾಹ ಅಬ್ದುಲ್ ರಝಾಕ್ (111ನೇ ಕ್ರಮಾಂಕ) ಅವರನ್ನು ಎದುರಿಸಬೇಕಾಗಿದೆ.

ಗುಂಪು ಹಂತ ದಾಟಿದರೆ ಸಿಂಧು ಅವರಿಗೆ 16ರ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಹೆ ಬಿಂಗ್ ಜಿಯಾವೊ (ಚೀನಾ) ಸಂಭವನೀಯ ಎದುರಾಳಿ. ಜಿಯಾವೊ ವಿರುದ್ಧ ಗೆದ್ದಲ್ಲಿ, ಒಲಿಂಪಿಕ್ ಚಾಂಪಿಯನ್ ಚೆನ್ ಯು ಫೀ (ಚೀನಾ) ಮುಖಾಮುಖಿಯಾಗಬಹುದು.

ಪುರುಷರ ಸಿಂಗಲ್ಸ್ನಲ್ಲಿ 13ನೇ ಶ್ರೇಯಾಂಕ ಪಡೆದಿರುವ ಪ್ರಣಯ್ ಮೊದಲ ಸಲ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದು ‘ಕೆ’ ಗುಂಪಿನಲ್ಲಿದ್ದಾರೆ. ಇದೂ ಅಷ್ಟು ಪ್ರಬಲವಾಗಿಲ್ಲ. ವಿಯೆಟ್ನಾಮ್ನ ಲಿ ಡುಕ್ ಫಟ್ (70ನೇ ಕ್ರಮಾಂಕ), ಜರ್ಮನಿಯ ಫ್ಯಾಬಿಯನ್ ರೋತ್ (82ನೇ ಕ್ರಮಾಂಕ) ಈ ಗುಂಪಿನ ಇತರ ಆಟಗಾರರು.

19ನೇ ಕ್ರಮಾಂಕದ ಲಕ್ಷ್ಯ ಸೇನ್ ಒಲಿಂಪಿಕ್ಸ್ನಲ್ಲಿ ಶ್ರೇಯಾಂಕರಹಿತರಾಗಿದ್ದು, ‘ಎಲ್’ ಗುಂಪಿನಲ್ಲಿದ್ದಾರೆ. ಇದು ಪ್ರಬಲ ಗುಂಪು. ಮೂರನೇ ಕ್ರಮಾಂಕದ ಜೊನಾಥನ್ ಕ್ರಿಸ್ಟಿ (ಇಂಡೊನೇಷ್ಯಾ), ಗ್ವಾಟೆಮಾಲಾದ ಕೆವಿನ್ ಕಾರ್ಡೊನ್ (41ನೇ ಕ್ರಮಾಂಕ) ಇದೇ ಗುಂಪಿನಲ್ಲಿದ್ದಾರೆ.

22 ವರ್ಷದ ಲಕ್ಷ್ಯ ಅವರು ಕ್ರಿಸ್ಟಿ ವಿರುದ್ಧ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಮಾತ್ರ.

ತನಿಶಾ–ಅಶ್ವಿನಿಗೆ ಸವಾಲು:

ವಿಶ್ವ ಕ್ರಮಾಂಕದಲ್ಲಿ 19ನೇ ಸ್ಥಾನದಲ್ಲಿರುವ ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ ಅವರು ಮಹಿಳಾ ಡಬಲ್ಸ್ನಲ್ಲಿ ‘ಸಿ’ ಗುಂಪಿನಲ್ಲಿದ್ದು ಪ್ರಬಲ ಸವಾಲು ಎದುರಾಗಿದೆ. ಈ ಗುಂಪಿನಲ್ಲಿ ವಿಶ್ವದ ನಾಲ್ಕನೇ ಕ್ರಮಾಂಕದ ನಾಮಿ ಮತ್ಸುಯಾಮಾ– ಚಿಹಾರು ಶಿಡಾ ಇದ್ದಾರೆ. ಟೋಕಿಯೊ ಕ್ರೀಡೆಗಳ ಕಂಚಿನ ಪದಕ ವಿಜೇತರಾದ ಕಿಮ್ ಸೊ ಯಂಗ್– ಕಾಂಗ್ ಹೀ ಯಾಂಗ್ (7ನೇ ಕ್ರಮಾಂಕ, ದಕ್ಷಿಣ ಕೊರಿಯಾ) ಅವರೂ ಇದ್ದಾರೆ. 27ನೇ ಕ್ರಮಾಂಕದ ಸೆಟ್ಯಾನಾ ಮಾಪಸಾ– ಆ್ಯಂಜೆಲಾ ಯು (ಆಸ್ಟ್ರೇಲಿಯಾ) ಸಹ ಇದೇ ಗುಂಪಿನಲ್ಲಿದ್ದಾರೆ.

ಮುಂದೂಡಿಕೆ:

ಡ್ರಾದಲ್ಲಿ ಇರುವ ಜೋಡಿಗಳ ಸಂಖ್ಯೆಗೆ ಸಂಬಂಧಿಸಿ ಕ್ರೀಡಾ ನ್ಯಾಯಮಂಡಳಿಯಲ್ಲಿ ನಿರ್ಧಾರ ಆಗಬೇಕಿರುವ ಕಾರಣ ಪುರುಷರ ಡಬಲ್ಸ್ ಡ್ರಾ ಮುಂದಕ್ಕೆ ಹೋಗಿದೆ. ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪದಕ ಗೆಲ್ಲುವ ನೆಚ್ಚಿನ ಜೋಡಿಯಾಗಿದ್ದು ಅವರಿಗೆ ಮೂರನೇ ಶ್ರೇಯಾಂಕ ನೀಡಲಾಗಿದೆ.

ಡ್ರಾ ದಿನಾಂಕದ ಬಗ್ಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಖಚಿತಪಡಿಸಿಲ್ಲ. ಜುಲೈ 27 ರಿಂದ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳು ಆರಂಭವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.