ನವದೆಹಲಿ: ರೇಡರ್ ಅಲಿರೆಜಾ ಮಿರ್ಜೈಯನ್ ಅವರ ‘ಸೂಪರ್ ಟೆನ್’ ಸಾಹಸದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್ನ ಪಂದ್ಯದಲ್ಲಿ ಭಾನುವಾರ 43–32ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು.

ಇಲ್ಲಿನ ತ್ಯಾಗರಾಜ್ ಕಾಂಪ್ಲೆಕ್ಸ್ನಲ್ಲಿ ನಡೆದ ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ತಂಡವು ಆರಂಭದಿಂದಲೇ ಮೇಲುಗೈ ಸಾಧಿಸಿತು. ಮೊದಲಾರ್ಧದಲ್ಲಿ 22–15ರಿಂದ ಮುಂದಿದ್ದ ಬೆಂಗಳೂರು, ದ್ವಿತೀಯಾರ್ಧದಲ್ಲಿಯೂ ಪಾರಮ್ಯ ಮುಂದುವರಿಸಿತು. ಅಲಿರೆಜಾ ರೇಡಿಂಗ್ನಲ್ಲಿ 18 ಅಂಕ ಸೂರೆ ಮಾಡಿದರು. ಆಶಿಶ್ ಮಲಿಕ್ (7) ಹಾಗೂ ದೀಪಕ್ ಶಂಕರ್ (6) ಮಹತ್ವದ ಕಾಣಿಕೆ ನೀಡಿದರು.

ರೋಚಕವಾಗಿದ್ದ ದಿನದ ಮೊದಲನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ಟೈಬ್ರೇಕರ್ನಲ್ಲಿ ದಬಂಗ್ ಡೆಲ್ಲಿ ತಂಡವನ್ನು ಮಣಿಸಿತು. ನಿಗದಿತ ಅವಧಿಯ ಪಂದ್ಯವು 38–38ರಿಂದ ಸಮಬಲಗೊಂಡಿತ್ತು. ‘ಗೋಲ್ಡನ್ ರೇಡ್’ನಲ್ಲಿ ಪಲ್ಟನ್ ತಂಡವು 6–5ರಿಂದ ಮೇಲುಗೈ ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.