ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ದಬಂಗ್ ಡೆಲ್ಲಿಗೆ ಮಣಿದ ಜೈಂಟ್ಸ್‌

ಮಿಂಚಿದ ಆಶು ಮಲಿಕ್, ಮಂಜಿತ್
Published 2 ಜನವರಿ 2024, 23:11 IST
Last Updated 2 ಜನವರಿ 2024, 23:11 IST
ಅಕ್ಷರ ಗಾತ್ರ

ನೊಯ್ಡಾ: ಆಶು ಮಲಿಕ್ ಮತ್ತು ಮಂಜಿತ್ ಅವರ ಚುರುಕಿನ ದಾಳಿಯಿಂದ ದಬಂಗ್‌ ಡೆಲ್ಲಿ ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 35–28ರಿಂದ ಗುಜರಾತ್‌ ಜೈಂಟ್ಸ್‌ ತಂಡವನ್ನು ಮಣಿಸಿತು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆ 16–14ರಿಂದ ಮುನ್ನಡೆಯಲ್ಲಿದ್ದ ಜೈಂಟ್ಸ್‌ ತಂಡವು ನಂತರ ಎಡವಿತು. ರೇಡಿಂಗ್‌ನಲ್ಲಿ ಮಿಂಚಿದ ಮಲಿಕ್ ದಬಂಗ್‌ ತಂಡಕ್ಕೆ 11 ಅಂಕ ತಂದುಕೊಟ್ಟು ಗೆಲುವಿನ ರೂವಾರಿಯಾದರು. ಜತೆಗೆ ಈ ಆವೃತ್ತಿಯಲ್ಲಿ ನಾಲ್ಕನೇ ಬಾರಿ ‘ಸೂಪರ್‌ ಟೆನ್’ ಸಾಧನೆ ಮಾಡಿದರು. ಅವರಿಗೆ ಮಂಜಿತ್‌ (9) ಸಾಥ್‌ ನೀಡಿದರು.

ಜೈಂಟ್ಸ್‌ ಪರವಾಗಿ ಪಾರ್ಥಿಕ್ ದಹಿಯಾ (9) ಏಕಾಂಗಿ ಹೋರಾಟ ನಡೆಸಿದರು. ತಂಡದ ನಾಯಕ ಇರಾನ್‌ನ ಫಜಲ್ ಅತ್ರಾಚಲಿ ಮೂರು ಪಾಯಿಂಟ್‌ ಗಳಿಸುವ ಮೂಲಕ ಪ್ರೊ ಕಬಡ್ಡಿ ಲೀಗ್‌ನಲ್ಲಿ ಟ್ಯಾಕಲ್‌ನಲ್ಲಿ 450 ಅಂಕ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಈ ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಬಾರಿ ಆಲೌಟ್‌ ಆದವು.

ಡೆಲ್ಲಿ ತಂಡವು ಆಡಿರುವ 9 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದರೆ, ಮೂರರಲ್ಲಿ ಸೋತಿದೆ. ಒಂದರಲ್ಲಿ ಡ್ರಾ ಸಾಧಿಸಿ 30 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಜೈಂಟ್ಸ್‌ ತಂಡವು ಆಡಿರುವ 10 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು, ನಾಲ್ಕರಲ್ಲಿ ಪರಾಭವಗೊಂಡು 34 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪುಣೇರಿ ಜೈಂಟ್ಸ್ ತಂಡವು 36 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು

ಹರಿಯಾಣ ಸ್ಟೀಲರ್ಸ್‌– ಜೈಪುರ ಪಿಂಕ್‌ ಪ್ಯಾಂಥರ್ಸ್‌ (ರಾತ್ರಿ 8)

ಯುಪಿ ಯೋಧಾಸ್‌– ಪುಣೇರಿ ಪಲ್ಟನ್‌ (ರಾತ್ರಿ 9)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT