ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಪ್ಯಾಂಥರ್ಸ್ ಯಶಸ್ಸಿನ ಓಟ ಅಬಾಧಿತ

Published 22 ಜನವರಿ 2024, 18:36 IST
Last Updated 22 ಜನವರಿ 2024, 18:36 IST
ಅಕ್ಷರ ಗಾತ್ರ

ಹೈದರಾಬಾದ್: ಯಶಸ್ಸಿನ ಓಟ ಮುಂದುವರಿಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡ, ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಸೋಮವಾರ 42–25 ಪಾಯಿಂಟ್‌ಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತು. ಪ್ಯಾಂಥರ್ಸ್‌ 63 ‍ಅಂಕ ಗಳಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪ್ಯಾಂಥರ್ಸ್‌ ಆರಂಭದಿಂದಲೇ ಪಾರಮ್ಯ ಸಾಧಿಸಿತ್ತು. ಪ್ಯಾಂರ್ಥಸ್‌ ಪರ ಅರ್ಜುನ್ ದೇಶ್ವಾಲ್ 15, ಭವಾನಿ ರಜಪೂತ 7, ಅಂಕುಶ್ 6 ಅಂಕ ಕಲೆ ಹಾಕಿ ಮಿಂಚಿದರು. ರೈಡಿಂಗ್‌ನಲ್ಲಿ 21, ಟ್ಯಾಕಲ್‌ನಲ್ಲಿ 14 ಪಾಯಿಂಟ್ ಕಲೆ ಹಾಕಿತು. ಇದು 15 ಪಂದ್ಯಗಳಲ್ಲಿ ಪ್ಯಾಂಥರ್ಸ್‌ ತಂಡಕ್ಕೆ 11ನೇ ಜಯ. 

ವಾರಿಯರ್ಸ್‌ ಪರ ವೈಭವ್‌ 9, ವೈಭವ್ ಭೌಸಾಹೇಬ್ ಗರ್ಜೆ 5 ಪಾಯಿಂಟ್‌ ಗಳಿಸಲಷ್ಟೇ ಶಕ್ತರಾದರು. 38 ಪಾಯಿಂಟ್‌ಗಳೊಂದಿಗೆ ವಾರಿಯರ್ಸ್ ತಂಡ ಆರನೇ ಸ್ಥಾನದಲ್ಲಿದೆ. 

ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವು 37–30 ಪಾಯಿಂಟ್‌ಗಳಿಂದ ಆತಿಥೇಯ ತೆಲುಗು ಟೈಟನ್ಸ್ ತಂಡವನ್ನು  ಸೋಲಿಸಿತು. ಸ್ಟೀಲರ್ಸ್‌ ವಿರಾಮದ ವೇಳೆಗೆ 24–12 ರಿಂದ ಮುನ್ನಡೆ ಪಡೆದಿತ್ತು. ಉತ್ತರಾರ್ಧದಲ್ಲೂ ಸಾಂಘಿಕ ಪ್ರದರ್ಶನ ನೀಡಿದ ತಂಡವು ಏಳು ಪಾಯಿಂಟ್ಸ್‌ ಅಂತರದಿಂದ ಎದುರಾಳಿ ತಂಡವನ್ನು ಮಣಿಸಿತು. ವಿನಯ್‌ (5 ) ರೈಡಿಂಗ್‌ನಲ್ಲಿ ಮತ್ತು ರಾಹುಲ್ ಸೇಠ್ಪಾಲ್ ( 5) ಟ್ಯಾಕಲ್‌ನಲ್ಲಿ ಮಿಂಚಿದರು. ಟೈಟನ್ಸ್ ಪರ ಎಸ್.ಸಂಜೀವ್‌ (6), ಪ್ರಫುಲ್ ಜಾವೇರ್ (6) ರೈಡಿಂಗ್‌ನಲ್ಲಿ ಗಮನ ಸೆಳೆದರು. 

39 ಪಾಯಿಂಟ್‌ಗಳೊಂದಿಗೆ ಹರಿಯಾಣ ಸ್ಟೀಲರ್ಸ್‌ 5ನೇ ಸ್ಥಾನದಲ್ಲಿದ್ದರೆ, 15 ಅಂಕಗಳೊಂದಿಗೆ  ಟೈಟನ್ಸ್‌ ಕೊನೆ ಸ್ಥಾನದಲ್ಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT