ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರಿನ ವಿಸಿಇಟಿ ತಂಡಕ್ಕೆ ಸಮಗ್ರ ಪ್ರಶಸ್ತಿ

ವಿಟಿಯು ಅಂತರ ಕಾಲೇಜು ಅಥ್ಲೆಟಿಕ್ಸ್‌
Published 24 ಮೇ 2023, 23:53 IST
Last Updated 24 ಮೇ 2023, 23:53 IST
ಅಕ್ಷರ ಗಾತ್ರ

ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜ್‌ ಆಫ್ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಜಿ (ವಿಸಿಇಟಿ) ತಂಡ, ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಮೈದಾನದಲ್ಲಿ ಬುಧವಾರ ಮುಕ್ತಾಯವಾದ 24ನೇ ಅಂತರ ಕಾಲೇಜು ಅಥ್ಲೆಟಿಕ್‌ ಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಮೊದಲ ದಿನದಿಂದಲೂ ಮೇಲುಗೈ ಸಾಧಿಸಿದ ವಿಸಿಇಟಿ ತಂಡ 136 ಅಂಕಗಳೊದಿಗೆ ಅಗ್ರಸ್ಥಾನ ಪಡೆಯಿತು. ಉಡುಪಿ ಜಿಲ್ಲೆಯ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್ಎಂಎಎಂಐಟಿ) ತಂಡ 61 ಅಂಕಗಳೊಂದಿಗೆ ರನ್ನರ್‌ ಅಪ್‌ ಪ್ರಶಸ್ತಿ ಪಡೆಯಿತು. ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು 40 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿತು.

ಪುರುಷರ ವಿಭಾಗದಲ್ಲಿ ನಿಟ್ಟೆಯ ಎನ್‌ಎಂಎಎಂಐಟಿ ತಂಡ ಪ್ರಥಮ, ಪುತ್ತೂರಿನ ವಿವೇಕಾನಂದ ಕಾಲೇಜು ದ್ವಿತೀಯ ಹಾಗೂ ಮಂಗಳೂರಿನ
ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತೃತೀಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ವಿಸಿಇಟಿ ಪ್ರಥಮ, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ದ್ವಿತೀಯ ಹಾಗೂ ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ತೃತೀಯ ಸ್ಥಾನ ಪಡೆದವು.

ಪುರುಷರ ವಿಭಾಗದಲ್ಲಿ ಬೆಂಗಳೂರಿನ ಜ್ಯೋತಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಎನ್.ಎಂ.ಜೀವನ್ 1,596 ಅಂಕಗಳೊಂದಿಗೆ ಅತ್ಯುತ್ತಮ ಅಥ್ಲೀಟ್‌ ಪ್ರಶಸ್ತಿ ಪಡೆದರೆ, ವೈಯಕ್ತಿಕ ಮಹಿಳಾ ವಿಭಾಗದಲ್ಲಿ ವಿಸಿಇಟಿಯ ಪವಿತ್ರಾ ಜಿ. 1,797 ಅಂಕಗಳೊಂದಿಗೆ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ ಗೌರವಕ್ಕೆ ಪಾತ್ರವಾದರು.

ದಾಖಲೆ: ಪುರುಷರ ಹಾಫ್‌ ಮ್ಯಾರಥಾನ್‌ನಲ್ಲಿ ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ರಂಗನಾಥ ಸಿ. ಅವರು 21 ಕಿ.ಮೀ. ದೂರವನ್ನು 1 ಗಂಟೆ, 11ನಿ. 16.53 ಸೆ.ಗಳಲ್ಲಿ ಕ್ರಮಿಸಿ, ಆಳ್ವಾಸ್‌ನ ಸುಜನ್ ಶೇಖರ್ ಹೆಸರಿನಲ್ಲಿದ್ದ ದಾಖಲೆ (1ಗಂ.16ನಿ.01 ಸೆ.) ಮುರಿದರು. ಮಹಿಳೆಯರ ಪೋಲ್‌ವಾಲ್ಟ್‌ನಲ್ಲಿ ಜಯಶ್ರೀ ಬಿ. 2ಮೀ. ಎತ್ತರ ಜಿಗಿದು ನೂತನ ದಾಖಲೆ ಸ್ಥಾಪಿಸಿದರು.

ನಗರ ಪೋಲಿಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.

ಫಲಿತಾಂಶಗಳು: 100 ಮೀ. ಓಟ: ಅಭಿರಂಜನ್‌ (ವಿಸಿಇಟಿ)–1, ಲೋಹಿತ್‌ (ವಿಸಿಇಟಿ)–2, ನಿರಂಜನ್‌ ಪಿ. (ಆರ್‌ಎನ್‌ಎಸ್‌ ಐಟಿ, ಬೆಂಗಳೂರು)–3, ಕಾಲ: 11.24 ಸೆ.; 400 ಮೀ. ಹರ್ಡಲ್ಸ್‌: ಸಂಕೇತ್‌ ಕೆ.ಕೆ. (ಎನ್‌ಎಂಎಐಟಿ)–1, ಆದರ್ಶ (ಎನ್‌ಎಂಎಐಟಿ)–2, ಗಗನ್‌ ನಾಡಿಗೇರ (ಕೆಎಲ್‌ಇ, ಹುಬ್ಬಳ್ಳಿ)–3, ಕಾಲ:1ನಿ.01.94 ಸೆ.; 4x400 ಮೀ. ರಿಲೆ: ವಿಸಿಇಟಿ, ಪುತ್ತೂರು–1, ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್ ಅಂಡ್‌ ಮ್ಯಾನೇಜ್‌ಮೆಂಟ್‌ –2, ಎನ್‌ಎಂಎಎಂಐಟಿ, ನಿಟ್ಟೆ–3 ಕಾಲ: 4ನಿ.09.35 ಸೆ., ಹಾಫ್ ಮ್ಯಾರಥಾನ್‌ (21 ಕಿ.ಮೀ.): ರಂಗನಾಥ್ ಸಿ.(ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ರಾಮನಗರ)–1, ತಿಶಾನ್‌ ಎ.ಎಂ. (ಕೆವಿಜಿ ಸಿಇ, ಸುಳ್ಯ)–2, ಎಸ್‌.ಬಿ.ಪ್ರಶಾಂತ್‌ (ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಕುಶಾಲನಗರ)–3, ಕಾಲ: 1ಗಂ. 11ನಿ.16.53 ಸೆ., ಹಳೆಯದು: 1ಗಂ.16ನಿ.01ಸೆ.; ಡೆಕಾಥ್ಲಾನ್‌: ಸಂಪತ್‌ ಹೆಗ್ಡೆ (ಸಹ್ಯಾದ್ರಿ)–1, ಅಭಿಷೇಕ್ ಎಸ್‌.ಎಂ. (ನ್ಯೂ ಹೊರೈಜನ್‌)–2, ಪ್ರತೀಕ್‌ರಾಜ್‌ ಎಸ್.ಎಂ. (ಸಹ್ಯಾದ್ರಿ)–3., 4,619 ಪಾಯಿಂಟ್‌. ಹ್ಯಾಮರ್‌ ಥ್ರೋ: ಕಿಶನ್‌ ಎ. (ವಿಸಿಇಟಿ)–1, ಸಂದೇಶ್ ಶೆಣೈ (ಎನ್‌ಎಂಎಐಟಿ)–2,  ಹರ್ಷಿತ್‌ ಎಂ.ನಾಯ್ಕ್ (ವಿಸಿಇಟಿ)–3, ದೂರ: 32.80 ಮೀ.; ಪೋಲ್‌ವಾಲ್ಟ್‌: ಜೀವನ್‌ ಎಂ.ಕ.ಎ (ಪಿಇಎಸ್‌ಐಟಿ, ಶಿವಮೊಗ್ಗ)–1, ಪವನ್‌ ಪಿ.ನಾಯ್ಕ್ (ಎನ್‌ಎಂಎಐಟಿ)–2, ವಿಲಾಸ್‌ ಚೌಟ ಬಿ. (ವಿಸಿಇಟಿ)–3, ಎತ್ತರ: 2.90 ಮೀ.

ಮಹಿಳೆಯರು: 100 ಮೀ. ಓಟ: ಧೃತಿ ಎಸ್‌.(ಬಿಎಂಎಸ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್, ಬೆಂಗಳೂರು)–1, ಪೂನಂ (ಕೆನರಾ ಎಂಜಿನಿಯರಿಂಗ್ ಕಾಲೇಜು, ಬೆಂಜನಪದವು)–2, ಧ್ರುವಾ ಎಂ. (ಎಎಂಸಿ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು)–3, ಕಾಲ: 13.72 ಸೆ.; 400 ಮೀ. ಹರ್ಡಲ್ಸ್‌: ಮೇಘನಾ ಪಿ.ಇ. (ವಿಸಿಇಟಿ)–1, ಶ್ರೇಯಾ (ಕೆನರಾ, ಬೆಂಜನಪದವು)–2, ಸ್ಮಿತಾ (ಸಹ್ಯಾದ್ರಿ, ಮಂಗಳೂರು)–3, ಕಾಲ: 1ನಿ.33.95 ಸೆ.; 21 ಕಿ.ಮೀ. ಹಾಫ್‌ ಮ್ಯಾರಥಾನ್‌: ವಿದ್ಯಾ ಸಿ.ಎಸ್‌. (ವಿಸಿಇಟಿ, ಪುತ್ತೂರು)–1, ಮಂಜುಳಾ ಪಿ. ಸುನಗದ (ಎಸ್‌ಡಿಎಂಇಟಿ, ಧಾರವಾಡ)–2, ಮಂಜುಶರ್ರೀ (ವಿಸಿಇಟಿ)–3, 1ಗಂ.45ನಿ.60 ಸೆ.; ಪೋಲ್‌ವಾಲ್ಟ್‌: ಜಯಶ್ರೀ ಬಿ. (ವಿಸಿಇಟಿ)–1, ಸಿಂಚನಾ ವಿ.ಎಸ್‌., (ವಿಸಿಇಟಿ)–2, ಎತ್ತರ: 2 ಮಿ., ಹಳೆಯ ದಾಖಲೆ: 1.80 ಮೀ. ಹ್ಯಾಮರ್ ಥ್ರೊ: ಶ್ರೀಯಾ ಶೆಟ್ಟಿ (ಎ‌ನ್‌ಎಂಎಐಟಿ, ನಿಟ್ಟೆ)–1, ಪ್ರೇರಣಾ ಕೆಮ್ಮಿಂಜೆ (ವಿಸಿಇಟಿ)–2, ತ್ರಿಶಲಾ (ಸಹ್ಯಾದ್ರಿ ಎಂಜಿನಿಯರಿಂಗ್ ಅಂಡ್‌ ಮ್ಯಾನೇಜ್‌ಮೆಂಟ್‌, ಮಂಗಳೂರು)–3. ದೂರ: 26.41 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT