ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌; ರಾಜಸ್ಥಾನ ಮಡಿಲಿಗೆ ಸಮಗ್ರ ಪ್ರಶಸ್ತಿ

28ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌; ಕರ್ನಾಟಕ ತಂಡ ರನ್ನರ್ಸ್‌
Published 12 ಜನವರಿ 2024, 20:54 IST
Last Updated 12 ಜನವರಿ 2024, 20:54 IST
ಅಕ್ಷರ ಗಾತ್ರ

ವಿಜಯಪುರ: ರಾಜಸ್ಥಾನದ ಸೈಕ್ಲಿಸ್ಟ್‌ಗಳು, ನಗರದಲ್ಲಿ ಕರ್ನಾಟಕ ಅಮೆಚೂರ್‌ ಸೈಕ್ಲಿಂಗ್‌ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ 28ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡರು. ನಾಲ್ಕು ದಿನಗಳ ಈ ಚಾಂಪಿಯನ್‌ಷಿಪ್‌ಗೆ ಶುಕ್ರವಾರ ತೆರೆಬಿತ್ತು.

ಮೊದಲ ದಿನದಿಂದಲೇ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ ತಂಡ 13 ಚಿನ್ನ, 6 ಬೆಳ್ಳಿ ಮತ್ತು 2 ಕಂಚಿನ ಪದಕಗಳೊಂದಿಗೆ 109 ಪಾಯಿಂಟ್ಸ್‌ ಸಂಪಾದಿಸಿ, ಸಮಗ್ರ ಪ್ರಶಸ್ತಿಗೆ ಪಾತ್ರವಾಯಿತು.

ರಾಜಸ್ಥಾನ ಸೈಕ್ಲಿಸ್ಟ್‌ಗಳಿಗೆ ಪೈಪೋಟಿ ನೀಡಿದ ಆತಿಥೇಯ ಕರ್ನಾಟಕದ ಸೈಕ್ಲಿಸ್ಟ್‌ಗಳು 5 ಚಿನ್ನ, 5 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ 67 ಪಾಯಿಂಟ್ಸ್‌ ಸಂಗ್ರಹಿಸಿ ರನ್ನರ್ಸ್ ಅಪ್‌ ಆದರು.

ಪುರುಷರ ವಿಭಾಗದಲ್ಲಿ ಮೂರು ಚಿನ್ನದ ಪದಕ (2 ವೈಯಕ್ತಿಕ, 1 ತಂಡ)ಗಳನ್ನು ಗಳಿಸಿದ ರಾಜಸ್ಥಾನದ ಖೇತ ರಾಮ್‌  ‘ಬೆಸ್ಟ್‌ ಮೆನ್‌’ ಹಾಗೂ ಮಹಿಳೆಯರ ವಿಭಾಗದಲ್ಲಿ ಎರಡು ಚಿನ್ನದ ಪದಕ ವಿಜೇತ ಭಾರತೀಯ ರೈಲ್ವೆಯ ಸ್ವಸ್ತಿ ಸಿಂಗ್‌ ‘ಬೆಸ್ಟ್‌ ವುಮೆನ್‌’ ಪ್ರಶಸ್ತಿಗೆ ಭಾಜನರಾದರು. ತಮಿಳುನಾಡು ತಂಡ ‘ಬೆಸ್ಟ್‌ ಫೇರ್‌ ಪ್ಲೇ’ ಗೌರವಕ್ಕೆ ಪಾತ್ರವಾಯಿತು.

ಏಷ್ಯನ್‌ ಸೈಕ್ಲಿಂಗ್‌ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಓಂಕಾರ್‌ ಸಿಂಗ್‌, ಭಾರತೀಯ ಸೈಕ್ಲಿಂಗ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಮಣಿಂದರ್‌ ಪಾಲ್‌ ಸಿಂಗ್‌ ಹಾಗೂ ಕರ್ನಾಟಕ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ ಅವರು ವಿಜೇತರಿಗೆ ಪದಕ ನೀಡಿದರು.

ಸೈಕ್ಲಿಂಗ್ ಚಾಂಪಿಯನ್‌ಷಿಪ್‌ ಫಲಿತಾಂಶ

ವಿಭಾಗ;ತಂಡ;ಸ್ಥಾನ;ಅಂಕ;ಚಿನ್ನ;ಬೆಳ್ಳಿ;ಕಂಚು

ಸೀನಿಯರ್‌ ವಿಭಾಗ;

ಚಾಂಪಿಯನ್ಸ್‌;ರೈಲ್ವೆ;33;6;1;0

ರನ್ನರ್ಸ್‌;ರಾಜಸ್ಥಾನ;13;1;2;2

ಜೂನಿಯರ್‌ ವಿಭಾಗ;

ಚಾಂಪಿಯನ್ಸ್‌;34;4;2;0

ರನ್ನರ್ಸ್‌;20;1;2;1

ಸಬ್‌ ಜೂನಿಯರ್‌;

ಚಾಂಪಿಯನ್ಸ್‌;ರಾಜಸ್ಥಾನ;57;7;3;0

ರನ್ನರ್ಸ್‌;ಕರ್ನಾಟಕ;32;2;2;4

ವಿಜಯಪುರದಲ್ಲಿ ಶುಕ್ರವಾರ ಮುಕ್ತಾಯವಾದ 28ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್ ಅಪ್‌ ಆದ ಆಥಿತೇಯ ಕರ್ನಾಟಕದ ಸೈಕ್ಲಿಸ್ಟ್‌ಗಳು ಟ್ರೋಪಿಯನ್ನು ಸ್ವೀಕರಿಸಿದರು
–ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಶುಕ್ರವಾರ ಮುಕ್ತಾಯವಾದ 28ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್ ಅಪ್‌ ಆದ ಆಥಿತೇಯ ಕರ್ನಾಟಕದ ಸೈಕ್ಲಿಸ್ಟ್‌ಗಳು ಟ್ರೋಪಿಯನ್ನು ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT