ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುನ್ನತ ಕ್ರೀಡಾ ಪ್ರಶಸ್ತಿ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆ

Published 3 ಡಿಸೆಂಬರ್ 2023, 15:09 IST
Last Updated 3 ಡಿಸೆಂಬರ್ 2023, 15:09 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅಧ್ಯಕ್ಷತೆಯಲ್ಲಿ 12 ಸದಸ್ಯರ ಸಮಿತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ಪ್ರಕಟಿಸಿದೆ.

ಈ ಸಮಿತಿಯು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ, ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಿದೆ.

ಸಮಿತಿಯಲ್ಲಿ  ಹಾಕಿ ಕ್ರೀಡೆಯ ದಿಗ್ಗಜ ಧನರಾಜ್ ಪಿಳ್ಳೆ, ಒಲಿಂಪಿಯನ್ ಬಾಕ್ಸರ್ ಅಖಿಲ್ ಕುಮಾರ್, ಶೂಟರ್ ಸುಮಾ ಶಿರೂರ್, ಟೇಬಲ್‌ ಟೆನಿಸ್‌ ಆಟಗಾರ  ಕಮಲೇಶ್ ಮೆಹ್ತಾ, ಮಾಜಿ ಕ್ರಿಕೆಟ್‌ ಆಟಗಾರ್ತಿ ಅಂಜುಂ ಚೋಪ್ರಾ, ಮಾಜಿ ಬ್ಯಾಡ್ಮಿಂಟನ್‌ಪಟು ತೃಪ್ತಿ ಮುರ್ಗುಂಡೆ ಮತ್ತು ಪವರ್ ಲಿಫ್ಟಿಂಗ್ ಫೆಡರೇಷನ್‌ನ ಫರ್ಮಾನ್ ಬಾಷಾ  ಇದ್ದಾರೆ.

ಕ್ರೀಡಾ ಪತ್ರಕರ್ತ ಅಭಿಷೇಕ್ ತ್ರಿಪಾಠಿ, ಸಾಯ್‌ ಡಿ.ಜಿ ಸಂದೀಪ್ ಪ್ರಧಾನ್, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ ಸಿಇಒ ಪುಷ್ಪೇಂದ್ರ ಗರ್ಗ್ ಮತ್ತು ಎಂವೈಎಎಸ್ ಜಂಟಿ ಕಾರ್ಯದರ್ಶಿ ಪ್ರೇಮ್ ಕುಮಾರ್ ಝಾ  ಸಮಿತಿಯಲ್ಲಿ  ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT