ನವದೆಹಲಿ: ಮುಂದಿನ ತಿಂಗಳು ಇಂಡೊನೇಷ್ಯಾದಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ಹಾಕಿ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.

ಹಾಕಿ ಇಂಡಿಯಾ ಪ್ರಕಟಿಸಿರುವ ತಂಡದಲ್ಲಿ ರೂಪಿಂದರ್ ಪಾಲ್ ಸಿಂಗ್ ಹಾಗೂ ಆಕಾಶ್‌ದೀಪ್ ಸಿಂಗ್ ಅವರು ಸ್ಥಾನಗಳಿಸಿದ್ದಾರೆ. ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೂಪಿಂದರ್ ಅವರು ಆಡಿರಲಿಲ್ಲ. ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಇನ್ನೂ ಗಾಯಗೊಂಡಿರುವ ರಮಣ್‌ದೀಪ್ ಸಿಂಗ್ ಬದಲಿಗೆ ಆಕಾಶ್‌ದೀಪ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನುಳಿದಂತೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಆಟಗಾರರನ್ನೇ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಈ ಟೂರ್ನಿಯಲ್ಲಿ ಭಾರತ ತಂಡವು ರನ್ನರ್ ಅಪ್ ಆಗಿತ್ತು.

‘ನಮ್ಮ ತಂಡದ ಎಲ್ಲ ವಿಭಾಗಗಳಲ್ಲಿ ಉತ್ತಮ ಆಟಗಾರರಿದ್ದಾರೆ. ಭಿನ್ನ ಸಾಮರ್ಥ್ಯವಿರುವ ಆಟಗಾರರ ಮಿಶ್ರಣ ಭಾರತ ತಂಡ. ಇದೇ ಕಾರಣದಿಂದ ಇತ್ತೀಚಿನ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗಿದೆ’ ಎಂದು ಭಾರತ ತಂಡದ ತರಬೇತುದಾರ ಹರೇಂದ್ರ ಸಿಂಗ್ ಹೇಳಿದ್ದಾರೆ.

ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವು ಚಿನ್ನದ ಸಾಧನೆ ಮಾಡಿತ್ತು.

ತಂಡ ಇಂತಿದೆ: ಗೋಲ್‌ಕೀಪರ್ಸ್: ಪಿ. ಆರ್. ಶ್ರೀಜೇಶ್ (ನಾಯಕ), ಬಿ. ಕೃಷ್ಣನ್ ಪಾಠಕ್.

ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಬಿರೇಂದ್ರ ಲಾಕ್ರಾ, ಸುರೇಂದರ್ ಕುಮಾರ್, ರೂಪಿಂದರ್ ಪಾಲ್ ಸಿಂಗ್, ಅಮಿತ್ ರೋಹಿದಾಸ್.

ಮಿಡ್‌ಫೀಲ್ಡರ್: ಮನ್‌ಪ್ರೀತ್ ಸಿಂಗ್, ಚಿಂಗ್ಲೆನ್‌ಸನಾ ಸಿಂಗ್ (ಉಪ ನಾಯಕ), ಸಿಮ್ರನ್‌ಜೀತ್ ಸಿಂಗ್, ಸರ್ದಾರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

ಫಾರ್ವರ್ಡ್ಸ್: ಎಸ್. ವಿ. ಸುನಿಲ್, ಮಂದೀಪ್ ಸಿಂಗ್, ಆಕಾಶ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ದಿಲ್‌ಪ್ರೀತ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.