ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗ್‌ ಪೂನಿಯಾ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲಿ: ಎಸ್‌ಎಐ

Published 21 ಆಗಸ್ಟ್ 2023, 20:51 IST
Last Updated 21 ಆಗಸ್ಟ್ 2023, 20:51 IST
ಅಕ್ಷರ ಗಾತ್ರ

ನವದೆಹಲಿ: ಕುಸ್ತಿಪಟು ಬಜರಂಗ್‌ ಪೂನಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಬೇಕು ಅಥವಾ ಫಿಟ್ನೆಸ್‌ ಪ್ರಮಾಣಪತ್ರ ನೀಡಬೇಕು ಎಂದು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಹೇಳಿದೆ.

ಏಷ್ಯನ್‌ ಗೇಮ್ಸ್‌ಗೆ ನೇರ ಅರ್ಹತೆ ಪಡೆದಿರುವ ಬಜರಂಗ್ ಅವರು ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಗಾಗಿ ಆ.25 ಮತ್ತು 26 ರಂದು ನಡೆಸಲಿರುವ ಟ್ರಯಲ್ಸ್‌ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಅದರ ಬದಲು ವಿದೇಶದಲ್ಲಿ ತರಬೇತಿ ಪಡೆಯುವ ಯೋಜನೆ ಹಾಕಿಕೊಂಡಿದ್ದಾರೆ. ಏಷ್ಯನ್ ಗೇಮ್ಸ್‌ ಸೆ.23 ರಂದು ಆರಂಭವಾಗಲಿದೆ.

ಐದು ವಾರಗಳ ಕಾಲ (ಆ.21 ರಿಂದ ಸೆ.28ರ ವರೆಗೆ) ಕಿರ್ಗಿಸ್ತಾನದಲ್ಲಿ ತರಬೇತಿ ಪಡೆಯಲು ಅವಕಾಶ ನೀಡಬೇಕು ಎಂದು ಬಜರಂಗ್‌ ಅವರು ಕೋರಿದ್ದಾರೆ.

‘ಟ್ರಯಲ್ಸ್‌ನಲ್ಲಿ ಏಕೆ ಪಾಲ್ಗೊಳ್ಳುತ್ತಿಲ್ಲ ಎಂದು ಬಜರಂಗ್‌ ಅವರಲ್ಲಿ ಕೇಳಿದ್ದೇವೆ. ಏಷ್ಯನ್‌ ಗೇಮ್ಸ್‌ಗಾಗಿ ವಿದೇಶದಲ್ಲಿ ತರಬೇತಿ ಪಡೆಯಲು ಬಯಸುವುದಾಗಿ ಅವರು ತಿಳಿಸಿದ್ದಾರೆ. ಆ.25 ಮತ್ತು 26 ರಂದು ನಡೆಯುವ ಟ್ರಯಲ್ಸ್‌ನಲ್ಲಿ ಪಾಲ್ಗೊಂಡ ಬಳಿಕ ಆ.27 ರಂದು ವಿದೇಶಕ್ಕೆ ಪ್ರಯಾಣಿಸುವಂತೆ ಅವರಿಗೆ ಸೂಚಿಸಿದ್ದೇವೆ’ ಎಂದು ಎಸ್‌ಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳದಿದ್ದರೆ ಫಿಟ್‌ನೆಸ್‌ ಪ್ರಮಾಣಪತ್ರ ಒದಗಿಸಬೇಕೇಂಬ ಸೂಚನೆಯನ್ನು ಕೊಟ್ಟಿದ್ದೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT