ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಫೈನಲ್‌ಗೆ ಸಾತ್ವಿಕ್ – ಚಿರಾಗ್ ಜೋಡಿ

ಲಕ್ಷ್ಯ ಸೇನ್‌ ನಿರ್ಗಮನ
Published 10 ಮಾರ್ಚ್ 2024, 14:48 IST
Last Updated 10 ಮಾರ್ಚ್ 2024, 14:48 IST
ಅಕ್ಷರ ಗಾತ್ರ

ಪ್ಯಾರಿಸ್: ವಿಶ್ವದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಫ್ರೆಂಚ್‌ ಓ‍ಪನ್ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ  ಭಾನುವಾರ ದಕ್ಷಿಣ ಕೊರಿಯಾದ ಸಿಯೊ ಸೆಯುಂಗ್ ಜೇ ಮತ್ತು ಕಾಂಗ್‌ ಮಿನ್ ಹ್ಯುಕ್‌ ಅವರನ್ನು ನೇರ್‌ ಗೇಮ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.  

ಇದು ಈ ವರ್ಷ ಇವರಿಬ್ಬರ ಸತತ ಮೂರನೇ ಫೈನಲ್ ಮತ್ತು ಈ ಟೂರ್ನಿಯಲ್ಲಿ ಮೂರನೇ ಬಾರಿಯಾಗಿದೆ. ಶನಿವಾರ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ 21-13, 21-16 ರಿಂದ ದಕ್ಷಿಣ ಕೊರಿಯಾ ಜೋಡಿಯ ವಿರುದ್ಧ ಗೆದ್ದರು.

ಲಕ್ಷ್ಯ ಸೇನ್ ಅವರು ಹಾಲಿ ವಿಶ್ವ ಚಾಂಪಿಯನ್ ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್ಸರ್ನ್ ವಿರುದ್ಧ ಸೋತು ಅಭಿಯಾನ ಕೊನೆಗೊಳಿಸಿದರು. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕುನ್ಲಾವುಟ್ 20-22, 21-13, 21-11 ಅಂತರದಲ್ಲಿ ಗೆದ್ದರು.

ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೊದಲ ಗೇಮ್ ಅನ್ನು ನಿರಾಯಾಸವಾಗಿ ಗೆದ್ದ ನಂತರ, ಎರಡನೇ ಗೇಮ್‌ನಲ್ಲಿಯೂ ಮೇಲುಗೈ ಸಾಧಿಸಿದರು. 

ಪಂದ್ಯದ ಮಧ್ಯದ ವಿರಾಮದ ನಂತರ ಕಾಂಗ್ ಮಿನ್ ಹ್ಯುಕ್ ಮತ್ತು ಸಿಯೊ ಸೆಯುಂಗ್ ಜೇ ಹೋರಾಟ ನಡೆಸಲು ಪ್ರಯತ್ನಿಸಿದರು. ಆದರೆ ಆರಂಭಿಕ ಮುನ್ನಡೆಯು ಭಾರತದ ಜೋಡಿಗೆ 40 ನಿಮಿಷಗಳಲ್ಲಿ ಪಂದ್ಯ ಗೆಲ್ಲಲು ಸಹಾಯ ಮಾಡಿತು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತದ ಜೋಡಿಯು ಚೀನಾ ತೈಪೆಯ ಲೀ ಝೆ-ಹುಯಿ ಮತ್ತು ಯಾಂಗ್ ಪೊ-ಹ್ಸುವಾನ್ ಅವರನ್ನು ಎದುರಿಸಲಿದ್ದು, ಸೆಮಿಫೈನಲ್‌ನಲ್ಲಿ ಜಪಾನ್‌ನ ಟಕುರೊ ಹೊಕಿ ಮತ್ತು ಯುಗೊ ಕೊಬಯಾಶಿ ಅವರನ್ನು ಸೋಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT