ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಸಂಭವನೀಯ ಶೂಟಿಂಗ್ ತಂಡ; ಅನೀಶ್, ಇಳವೆನಿಲ್‌ಗೆ ಸ್ಥಾನ

Last Updated 26 ಜೂನ್ 2020, 16:15 IST
ಅಕ್ಷರ ಗಾತ್ರ

ನವದೆಹಲಿ : ಭರವಸೆಯ ಶೂಟಿಂಗ್‌ ಪಟುಗಳಾದ ಅನೀಶ್ ಭಾನವಾಲಾ ಮತ್ತು ಇಳವೆನಿಲ್ ವಾಳರಿವನ್ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಭಾರತದ ಸಂಭವನೀಯ ಶೂಟಿಂಗ್ ತಂಡದಲ್ಲಿ ಸ್ಥಾನ ಲಭಿಸಿದೆ.

ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಶುಕ್ರವಾರ 34 ಶೂಟರ್‌ಗಳ ಪಟ್ಟಿಯನ್ನು ಪ್ರಕಟಿಸಿದೆ.

ಇದೇ ವರ್ಷ ಒಲಿಂಪಿಕ್ ಕೂಟ ನಡೆಯಬೇಕಿತ್ತು. ವಿಶ್ವದೆಲ್ಲೆಡೆ ಕೊರೊನಾ ವೈರಸ್‌ ಸೋಂಕು ಪ್ರಸರಣದಿಂದಾಗಿ ಕೂಟವನ್ನು ಮುಂದೂಡಲಾಗಿತ್ತು.

ಭಾರತದಲ್ಲಿಯೂ ಹೋದ ಮೂರು ತಿಂಗಳಿನಿಂದ ಲಾಕ್‌ಡೌನ್ ಇದೆ. ಆದರೆ ಶೂಟಿಂಗ್ ಪಟುಗಳು ತಮ್ಮ ಮನೆಗಳಲ್ಲಿಯೇ ಮಾಡಿಕೊಂಡಿರುವ ರೇಂಜ್‌ಗಳಲ್ಲಿ ಅಭ್ಯಾಸ ನಡೆಸಿದ್ದಾರೆ. ಆನ್‌ಲೈನ್ ಶೂಟಿಂಗ್ ಸ್ಪರ್ಧೆಗಳೂ ನಡೆದಿದ್ದವು. ಹೋದ ವರ್ಷ ಏಷ್ಯನ್ ಚಾಂಪಿಯನ್‌ಷಿಪ್, ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌ ಕೂಟಗಳಲ್ಲಿ ಪದಕ ಸಾಧನೆ ಮಾಡಿದ ಶೂಟಿಂಗ್ ಪಟುಗಳಿಗೆ ಈ ಆಯ್ಕೆಯಲ್ಲಿ ಆದ್ಯತೆ ನೀಡಲಾಗಿದೆ.

ಪುರುಷರು: 50 ಮೀ ರೈಫಲ್ 3ಪಿ: ಐಶ್ವರ್ಯ್ ಪ್ರತಾಪ ಸಿಂಗ್, ಪಾರುಲ್ ಕುಮಾರ್, ಸಂಜೀವ್ ರಾಜಪೂತ್, ಸ್ವಪ್ನಿಲ್ ಕುಶಾಲೆ. 10 ಮೀ ಪಿಸ್ತೂಲ್: ಅಭಿಷೇಕ್ ವರ್ಮಾ, ಓಂ ಪ್ರಕಾಶ್ ಮುಠಾರ್ವಾಲ್, ಸೌರಭ್ ಚೌಧರಿ, ಶೆಹಜಾರ್ ರಿಜ್ವಿ, ಸ್ಕೀಟ್: ಅಂಗದ ವೀರ್ ಸಿಂಗ್ ಬಜ್ವಾ, ಗುರುಜ್ಯೋತ್ ಸಿಂಗ್, ಮೈರಾಜ್ ಅಹಮದ್ ಖಾನ್, ಶೀರಾಜ್ ಶೇಖ್.

ಮಹಿಳೆಯರು: 50 ಮೀ ರೈಫಲ್ 3ಪಿ: ಅಂಜುಮ್ ಮೌದ್ಗಿಲ್, ಎನ್. ಗಾಯತ್ರಿ, ಸುನಿಧಿ ಚವ್ಹಾಣ್, ತೇಜಸ್ವಿನಿ ಸಾವಂತ್. 10 ಮೀ ರೈಫರ್: ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೆಲಾ,ಇಳವೆನಿಲ್ ವಾಳರಿವನ್, ಶ್ರೇಯಾ ಅಗರವಾಲ್, 25 ಮೀ ಪಿಸ್ತೂಲ್: ಅಭಿದ್ನಾ ಪಾಟೀಲ, ಚಿಂಕಿ ಯಾದವ್, ಮನು ಭಾಕರ್, ರಾಹಿ ಸರ್ನೋಬತ್. 10 ಮೀ ಪಿಸ್ತೂಲ್: ಅನುರಾಜ್ ಸಿಂಗ್, ಈಶಾ ಸಿಂಗ್, ಮನು ಭಾಕರ್, ಯಶಸ್ವಿನಿ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT