ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಬಾಕ್ಸರ್ಗಳು ಪಾರಮ್ಯ ಮೆರೆದಿದ್ದಾರೆ. ಇದುವರೆಗೆ ಒಟ್ಟು ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಸೋಮವಾರ ತಡರಾತ್ರಿ ನಡೆದ ಫೈನಲ್ ಬೌಟ್ಗಳಲ್ಲಿ ಎದುರಾಳಿಗಳಿಗೆ ಸೋಲುಣಿಸಿದ ಸ್ನೇಹಾ ಕುಮಾರಿ (ಮಹಿಳೆಯರ 66 ಕೆಜಿ ವಿಭಾಗ), ಖುಷಿ (75 ಕೆಜಿ), ಪ್ರೀತಿ ದಹಿಯಾ (60 ಕೆಜಿ) ಮತ್ತು ನೇಹಾ (54 ಕೆಜಿ) ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.

ಕಡಿಮೆ ಸಂಖ್ಯೆಯ ಸ್ಪರ್ಧಿಗಳಿದ್ದುದ್ದರಿಂದ ಭಾರತದ 10 ಮಂದಿ ಮಹಿಳೆಯರ ಪೈಕಿ ಆರು ಮಂದಿ ನೇರವಾಗಿ ಫೈನಲ್ಗೆ ಅರ್ಹತೆ ಗಳಿಸಿದ್ದರು.

ಫೈನಲ್ ಬೌಟ್ನಲ್ಲಿ ಪ್ರೀತಿ 3–2ರಿಂದ ಕಜಕಸ್ತಾನದ ಜುಲ್ದೀಜ್ ಶಯಕ್ಮೆತೊವಾ ಎದುರು, ಸ್ನೇಹಾ ಅವರು ಯುಎಇಯ ರೆಹಮಾ ಖಲ್ಫಾನ್ ವಿರುದ್ಧ, ಖುಷಿ 3–0ರಿಂದ ಕಜಕಸ್ತಾನದ ದಾನಾ ದಿದಾಯ್ ವಿರುದ್ಧ ಜಯ ಗಳಿಸಿದರು.

ಪುರುಷರ ವಿಭಾಗದಲ್ಲಿ ಈಗಾಗಲೇ ವಿಶ್ವಾಮಿತ್ರ ಚೋಂಗಥಮ್ (51 ಕೆಜಿ), ವಿಶಾಲ್ (80 ಕೆಜಿ) ಪ್ರಶಸ್ತಿ ಗೆದ್ದುಕೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಪ್ರೀತಿ (57 ಕೆಜಿ), ಖುಷಿ (63 ಕೆಜಿ), ತನಿಶಾ ಸಂಧು (81 ಕೆಜಿ), ನಿವೇದಿತಾ (48 ಕೆಜಿ), ತಮನ್ನಾ (50 ಕೆಜಿ) ಮತ್ತು ಸಿಮ್ರನ್ (52 ಕೆಜಿ) ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.