ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಚಿನ್ನ

Published 1 ಮೇ 2023, 19:12 IST
Last Updated 1 ಮೇ 2023, 19:12 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಲಾಂಗ್‌ಜಂಪ್‌ ಅಥ್ಲೀಟ್‌ ಮುರಳಿ ಶ್ರೀಶಂಕರ್ ಅವರು ಅಮೆರಿಕದ ಚುಲುವಿಸ್ತಾದಲ್ಲಿ ನಡೆದ ಎಂವಿಎ ಹೈ ಪರ್ಫಾರ್ಮನ್ಸ್ ಅಥ್ಲೆಟಿಕ್ಸ್ ಕೂಟ 1ರಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಈ ಋತುವಿನ ಎರಡನೇ ಕೂಟದಲ್ಲಿ ಸ್ಪರ್ಧಿಸಿದ 24 ವರ್ಷದ ಶ್ರೀಶಂಕರ್, 8.29 ಮೀಟರ್ಸ್ ಸಾಧನೆ ಮಾಡಿದರು. 

2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಕೂಟದ ಬೆಳ್ಳಿ ಪದಕ ವಿಜೇತ ಶ್ರೀಶಂಕರ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 8.36 ಮೀ. ಆಗಿದೆ. 

ಈ ಕೂಟದಲ್ಲಿ ಚೀನಾದ ಮಾ ವೆಡಾಂಗ್‌ ಬೆಳ್ಳಿ (7.99 ಮೀ.) ಮತ್ತು ಅದೇ ದೇಶದ ಹುಫೆಂಗ್‌ ಹುವಾಂಗ್‌ (7.61 ಮೀ.) ಕಂಚು ಗಳಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ ಅರ್ಹತೆಗೆ 8.25 ಮೀ. ಮಾನದಂಡವಿದೆ. ಆದರೆ ಈ ಕೂಟದಲ್ಲಿ ಗಾಳಿಯ ವೇಗವು (ಟೇಲ್‌ವಿಂಡ್ಸ್) ಅನುಮತಿಯ ಮಿತಿಗಿಂತ ಹೆಚ್ಚಿದ್ದರಿಂದ ಶ್ರೀಶಂಕರ್‌ ಅವರ ಫಲಿತಾಂಶವನ್ನು ಅರ್ಹತೆಗೆ ಪರಿಗಣಿಸಲಿಲ್ಲ.

ಶ್ರೀಶಂಕರ್‌ 8.36 ಮೀಟರ್ಸ್ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಹೊಂದಿದ್ದರು. ಆದರೆ ಮಾರ್ಚ್‌ನಲ್ಲಿ ನಡೆದ ಇಂಡಿಯಾ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಜೆಸ್ವಿನ್‌ ಅಲ್‌ಡ್ರಿನ್‌ (8.42 ಮೀ.) ಈ ದಾಖಲೆ ಮೀರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT