ಒಡೆನ್ಸ್, ಡೆನ್ಮಾರ್ಕ್ : ಇಂಗ್ಲೆಂಡ್ನ ಟೋಬಿ ಪೆಂಟಿ ಅವರ ಸವಾಲು ಮೀರಿದ ಭಾರತದ ಕಿದಂಬಿ ಶ್ರೀಕಾಂತ್, ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.

ವಿಶ್ವ ರ್ಯಾಂಕಿಂಗ್ನಲ್ಲಿ ಈ ಹಿಂದೆ ಅಗ್ರಸ್ಥಾನ ಅಲಂಕರಿಸಿದ್ದ ಶ್ರೀಕಾಂತ್, 21–12, 21–18ರಿಂದ ಟೋಬಿಗೆ ಸೋಲುಣಿಸಿದರು. ಕೇವಲ 37 ನಿಮಿಷಗಳಲ್ಲಿ ಹಣಾಹಣಿ ಅಂತ್ಯವಾಯಿತು.

ಇಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಶ್ರೀಕಾಂತ್, ಎರಡನೇ ಸುತ್ತಿನಲ್ಲಿ ಭಾರತದ ಶುಭಾಂಕರ್ ಡೇ ಅಥವಾ ಕೆನಡಾದ ಜೇಸನ್ ಅಂಥೋನಿ ಹೋ ಶುಯಿ ಅವರನ್ನು ಎದುರಿಸಲಿದ್ದಾರೆ.

ಶ್ರೀಕಾಂತ್ ಅವರು 2017ರಲ್ಲಿ ನಾಲ್ಕು ಸೂಪರ್ ಸಿರೀಸ್ ಪ್ರಶಸ್ತಿ ಜಯಿಸಿದ್ದಾರೆ.

ಭಾರತದ ಇನ್ನೋರ್ವ ಆಟಗಾರ ಲಕ್ಷ್ಯ ಸೇನ್, ಟೂರ್ನಿಯಲ್ಲಿ ಈಗಾಗಲೇ ಎರಡನೇ ಸುತ್ತಿಗೆ ಕಾಲಿಟ್ಟಿದ್ದಾರೆ.

ಕೋವಿಡ್–19 ಹಾವಳಿಯ ಹಿನ್ನೆಲೆಯಲ್ಲಿ ಏಳು ತಿಂಗಳುಗಳ ಬಳಿಕ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳು ಆರಂಭಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.