ನವದೆಹಲಿ: ಬಿಜೆಪಿ ನಾಯಕ ಸುಧಾಂಶು ಮಿತ್ತಲ್ ಅವರು ಭಾರತ ಕೊಕ್ಕೊ ಫೆಡರೇಷನ್ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು. ಪಂಜಾಬ್ನ ಉಪಕಾರ್ ಸಿಂಗ್ ವಿರ್ಕ್ ನೂತನ ಕಾರ್ಯದರ್ಶಿಯಾಗಿದ್ದಾರೆ.

ಫೆಡರೇಷನ್ನ ಆಡಳಿತ ಮಂಡಳಿ ಸಭೆ ಬುಧವಾರ ಇಲ್ಲಿ ನಡೆಯಿತು. ಆಡಳಿತ ಮಂಡಳಿಗೆ ಎಂಟು ಉಪಾಧ್ಯಕ್ಷರನ್ನು
ಆಯ್ಕೆ ಮಾಡಲಾಗಿದೆ. ಇವರಲ್ಲಿ ಕರ್ನಾಟಕ ಕೊಕ್ಕೊ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಅವರೂ ಒಬ್ಬರಾಗಿದ್ದಾರೆ.

2030ರ ಏಷ್ಯನ್ ಕ್ರೀಡೆಗಳಲ್ಲಿ ಮತ್ತು 2032ರ ಒಲಿಂಪಿಕ್ಸ್ಗೆ ಕೊಕ್ಕೊ ಸೇರ್ಪಡೆ ಮಾಡಲು ಸರ್ವಪ್ರಯತ್ನ
ಮಾಡುವುದಾಗಿ ಮಿತ್ತಲ್ ಈ ಸಂದರ್ಭದಲ್ಲಿ ತಿಳಿಸಿದರು. ಈಗ 58 ರಾಷ್ಟ್ರಗಳಲ್ಲಿ ಕೊಕ್ಕೊ ಆಡಲಾಗುತ್ತಿದೆ. ಈ ವರ್ಷ ಅದನ್ನು 90ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.