ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌ ಒಲಿಂಪಿಯಾಡ್‌ ಜ್ಯೋತಿ ಹಸ್ತಾಂತರ

Published 14 ಫೆಬ್ರುವರಿ 2024, 14:21 IST
Last Updated 14 ಫೆಬ್ರುವರಿ 2024, 14:21 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂದಿನ ಚೆಸ್‌ ಒಲಿಂಪಿಯಾಡ್‌ ಬುಡಾಪೆಸ್ಟ್‌ನಲ್ಲಿ (ಹಂಗೆರಿ) ನಡೆಯಲಿದ್ದು, ಈ ಪ್ರಕ್ರಿಯೆಯ ಭಾಗವಾಗಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಇಲ್ಲಿ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಚೆಸ್‌ ಒಲಿಂಪಿಯಾಡ್‌ ಕ್ರೀಡಾ ಜ್ಯೋತಿಯನ್ನು ಬುಧವಾರ ಫಿಡೆ ಅಧ್ಯಕ್ಷ ಅರ್ಕಾಡಿ ದ್ವೊರ್ಕೊವಿಚ್ ಮತ್ತು ಆತಿಥ್ಯ ವಹಿಸಲಿರುವ ನಗರದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ಚೆನ್ನೈನಲ್ಲಿ ಕಳೆದ ಜುಲೈ– ಆಗಸ್ಟ್‌ನಲ್ಲಿ 44ನೇ ಚೆಸ್‌ ಒಲಿಂಪಿಯಾಡ್‌ ನಡೆದಿತ್ತು. ಒಲಿಂಪಿಯಾಡ್‌ಗೆ ಪೂರ್ವಭಾವಿಯಾಗಿ ಮೊದಲ ಸಲ ಜ್ಯೋತಿ ಯಾತ್ರೆಯ ಸಂಪ್ರದಾಯ ನಡೆಸಲಾಗಿತ್ತು.

ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್ ಆನಂದ್ ಮತ್ತು ಹಂಗೆರಿಯ ಗ್ರ್ಯಾಂಡ್‌ಮಾಸ್ಟರ್ ಜುಡಿತ್ ಪೋಲ್ಗಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT