ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಟ್ರಯಲ್ಸ್: ಹಿಂದೆ ಸರಿದ ವಿನೇಶಾ

ವಿಶ್ವ ಚಾಂಪಿಯನ್‌ಷಿಪ್‌ಗೆ ತಂಡದ ಆಯ್ಕೆ: ತಂಡಕ್ಕೆ ಸಂಗೀತಾ ಪೋಗಟ್‌
Last Updated 31 ಆಗಸ್ಟ್ 2021, 16:16 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಯಾಗಿ ನಡೆಯುತ್ತಿರುವ ಟ್ರಯಲ್ಸ್‌ನ ಮಧ್ಯದಲ್ಲೇ ವಿನೇಶಾ ಪೋಗಟ್‌ ಅವರು ಹಿಂದೆ ಸರಿದಿದ್ದಾರೆ. ಆದರೆ ಅವರ ಸಹೋದರ ಸಂಬಂಧಿ ಸಂಗೀತಾಪೋಗಟ್‌ ಉತ್ತಮ ಸಾಮರ್ಥ್ಯ ತೋರಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಮಂಗಳವಾರ ಇಲ್ಲಿಟ್ರಯಲ್ಸ್‌ ಆರಂಭವಾಗಿದೆ. ಇತ್ತೀಚೆಗೆ ಭಾರತ ಕುಸ್ತಿ ಫೆಡರೇಷನ್‌ನಿಂದ ಅಶಿಸ್ತಿನ ಕಾರಣದಿಂದ ವಿನೇಶಾ ಪೋಗಟ್ ಅಮಾನತುಗೊಂಡಿದ್ದರು. ಬಳಿಕ ಎಚ್ಚರಿಕೆ ನೀಡಿ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವರಿಗೆ ಅನುಮತಿ ನೀಡಲಾಗಿತ್ತು.

55 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ವಿನೇಶಾ ಮೊದಲ ಸುತ್ತಿನಲ್ಲಿ 10–5ರಿಂದ ಅಂಜು ಎದುರು ಗೆಲುವು ಸಾಧಿಸಿದ್ದರು. ಆದರೆ ಪಿಂಕಿ ಎದುರು ಆಡಬೇಕಿದ್ದ ಮುಂದಿನ ಬೌಟ್‌ನಲ್ಲಿ ಅವರು ಕಣಕ್ಕಿಳಿಯಲಿಲ್ಲ. ಹೀಗಾಗಿ ಪಿಂಕಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು.

‘ನನಗೇನಾಯಿತು ಎಂಬುದು ಗೊತ್ತಾಗಲಿಲ್ಲ. ಗಾಯವೂ ಆಗಲಿಲ್ಲ. ನನಗೆ ತಲೆ ಸುತ್ತಿದ ಅನುಭವವಾಯಿತು‘ ಎಂದು ವಿನೇಶಾ ಹೇಳಿದ್ದಾರೆ.

62 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಂಗೀತಾ ಪೋಗಟ್‌ ಮೊದಲ ಸುತ್ತಿನಲ್ಲಿ ಸಂಜು ದೇವಿ ಎದುರು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆಲುವು ಸಾಧಿಸಿದರೆ, ನಂತರ 9–5ರಿಂದ ಮನೀಷಾ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT