ವಿಜಯನಗರ, ಬಳ್ಳಾರಿ ಜಿಲ್ಲೆ : ಸೋನಿಯಾ ಲಾಥರ್ ಮತ್ತು ಸಿಮ್ರನ್ಜೀತ್ ಕೌರ್ ಇಲ್ಲಿ ನಡೆಯುತ್ತಿರುವ ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಪಿಂಕಿ ಜಂಗ್ರ ಮತ್ತು ಮನೀಷಾ ಮೌನ್ ಕೂಟ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.
ಬುಧವಾರದ ಬೌಟ್ನಲ್ಲಿ ಹರಿಯಾಣದ ಪಿಂಕಿ 51 ಕೆಜಿ ವಿಭಾಗದ ಬೌಟ್ನಲ್ಲಿ ದೆಹಲಿಯ ಪ್ರತಿಭಾ ಎದುರು ಗೆದ್ದರು. ಪಂಜಾಬ್ನ ಸಿಮ್ರನ್ಜೀತ್ 64 ಕೆಜಿ ವಿಭಾಗದಲ್ಲಿ ಹಿಮಾಚಲಪ್ರದೇಶದ ಸಂಧ್ಯಾ ಅವರನ್ನು ಮಣಿಸಿದರು. 54 ಕೆಜಿ ವಿಭಾಗದಲ್ಲಿ ಮನಿಷಾ, ದೆಹಲಿಯ ರಿಯಾ ಟೊಕಾಸ್ ಎದುರು ಗೆದ್ದರು.