ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಚೇಂದಂಡ ತಂಡ ಚಾಂಪಿಯನ್‌

ಕುಂಡ್ಯೋಳಂಡ ಕಪ್; 24ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಸಂಭ್ರಮದ ತೆರೆ
Published 28 ಏಪ್ರಿಲ್ 2024, 19:18 IST
Last Updated 28 ಏಪ್ರಿಲ್ 2024, 19:18 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಚೇಂದಂಡ ತಂಡವು ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ‘ಕುಂಡ್ಯೋಳಂಡ ಕಪ್‌’ 24ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ 3ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. 

ಭಾನುವಾರ ಬಿರುಬಿಸಿಲಿನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ  ಚೇಂದಂಡ 8–7 ಗೋಲುಗಳ ಅಂತರದಿಂದ ನೆಲ್ಲಮಕ್ಕಡ ತಂಡವನ್ನು ಪರಾಭವಗೊಳಿಸಿತು. 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಈ ಜಿದ್ದಾಜಿದ್ದಿನ ಪಂದ್ಯಕ್ಕೆ ಸಾಕ್ಷಿಯಾದರು.

ಆರಂಭದಿಂದಲೂ ಉಭಯ ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದವು. ಚೇಂದಂಡ ಪರ ನಿಕಿನ್ ತಿಮ್ಮಯ್ಯ 2 ಗೋಲು ದಾಖಲಿಸಿದರೆ, ಎದುರಾಳಿ ತಂಡದ ‍ಪರ ರೋಷನ್ ಮತ್ತು ಮ್ಯಾಕ್ ಮೊಣ್ಣಪ್ಪ ತಲಾ ಒಂದು ಗೋಲು ಮೂಲಕ ಸ್ಕೋರ್ ಸಮನಾಗಿಸಿದರು.

ಪೆನಾಲ್ಟಿ ಶೂಟೌಟ್‌ನಲ್ಲೂ ಎರಡೂ ತಂಡಗಳೂ ಪೈಪೋಟಿ ತೋರಿದವು. ಅಂತಿಮವಾಗಿ ಚೇಂದಂಡ ಕೇವಲ ಒಂದು ಗೋಲಿನ ಅಂತರದಿಂದ ವಿಜಯದ ನಗೆ ಬೀರಿತು. 3 ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಕುಪ್ಪಂಡ (ಕೈಕೇರಿ) ವಿರುದ್ಧ 3- 2 ಅಂತರದಿಂದ ಜಯಿಸಿತು.

ವಿಜೇತ ತಂಡವಾದ ಚೇಂದಂಡ ₹ 4 ಲಕ್ಷ, ದ್ವಿತೀಯ ಸ್ಥಾನ ಗಳಿಸಿದ ನೆಲ್ಲಮಕ್ಕಡ ತಂಡ ₹ 3 ಲಕ್ಷ, ತೃತೀಯ ಸ್ಥಾನ ಗಳಿಸಿದ ಕುಲ್ಲೇಟಿರ ತಂಡ ₹ 2 ಲಕ್ಷ  ಹಾಗೂ 4ನೇ ಸ್ಥಾನ ಪಡೆದ ಕುಪ್ಪಂಡ (ಕೈಕೇರಿ) ₹ 1 ಲಕ್ಷ ನಗದು ಬಹುಮಾನದೊಂದಿಗೆ ಟ್ರೋಫಿ ಎತ್ತಿ ಹಿಡಿದವು.

ಮುದ್ದಂಡ ಕುಟುಂಬಕ್ಕೆ ಆತಿಥ್ಯ: ‘ಮುಂದಿನ ವರ್ಷ 25ನೇ ಕೌಟುಂಬಿಕ ಹಾಕಿ ಉತ್ಸವ ಮುದ್ದಂಡ ಕುಟುಂಬಸ್ಥರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ನಡೆಯಲಿದೆ’ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಇದೇ ವೇಳೆ ಪ್ರಕಟಿಸಿದರು.

ಚೇಂದಂಡ ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಫೈನಲ್‌ ಪಂದ್ಯದ ರೋಚಕ ಕ್ಷಣ
ಚೇಂದಂಡ ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಫೈನಲ್‌ ಪಂದ್ಯದ ರೋಚಕ ಕ್ಷಣ
ಚೇಂದಂಡ ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಫೈನಲ್‌ ಪಂದ್ಯದ ರೋಚಕ ಕ್ಷಣ
ಚೇಂದಂಡ ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಫೈನಲ್‌ ಪಂದ್ಯದ ರೋಚಕ ಕ್ಷಣ

ಗಿನ್ನಿಸ್ ದಾಖಲೆ ಬರೆದ ಟೂರ್ನಿ

‘ಒಟ್ಟು 360 ಕುಟುಂಬಗಳ 3 ಸಾವಿರಕ್ಕೂ ಅಧಿಕ ಹಾಕಿ ಆಟಗಾರರು ಪಾಲ್ಗೊಳ್ಳುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ 24ನೇ ಆವೃತ್ತಿ ಕುಂಡ್ಯೋಳಂಡ ಕಪ್ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು’ ಎಂದು ಗಿನ್ನಿಸ್ ಬುಕ್‌ ಆಫ್ ರೆಕಾರ್ಟ್‌ ಸಮಿತಿ ಸದಸ್ಯ ಸ್ವಪ್ನಿಲ್ ಘೋಷಿಸಿದರು. ಪ್ರಮಾಣಪತ್ರವನ್ನು ಕುಂಡ್ಯೋಳಂಡ ಕುಟುಂಬಕ್ಕೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT