ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಬಾಂಗ್ಲಾ ವಿರುದ್ಧ 44 ರನ್‌ಗಳಿಂದ ಭಾರತಕ್ಕೆ ಜಯ

Published 28 ಏಪ್ರಿಲ್ 2024, 19:21 IST
Last Updated 28 ಏಪ್ರಿಲ್ 2024, 19:21 IST
ಅಕ್ಷರ ಗಾತ್ರ

ಸಿಲೆಟ್‌ (ಬಾಂಗ್ಲಾದೇಶ): ರೇಣುಕಾ ಸಿಂಗ್ (18ಕ್ಕೆ3) ಮತ್ತು ಪೂಜಾ ವಸ್ತ್ರಾಕರ್‌ (25ಕ್ಕೆ2) ಅವರ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಮಹಿಳೆಯರ ತಂಡವು ಭಾನುವಾರ ನಡೆದ ಟಿ20 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 44 ರನ್‌ಗಳಿಂದ ಜಯಿಸಿತು. 

ಶಫಾಲಿ ವರ್ಮಾ (31, 22ಎ) ಮತ್ತು ಯಷ್ಟಿಕಾ ಭಾಟಿಯಾ (36, 29ಎ) ಅವರ ಬ್ಯಾಟಿಂಗ್‌ನಿಂದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ ಗಳಿಗೆ 145 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆತಿಥೇಯ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 101 ಗಳಿಸಿತು.

ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 145. (ಶೆಫಾಲಿ ವರ್ಮಾ 31, ಯಷ್ಟಿಕಾ ಭಾಟಿಯಾ 36, ರಬೆಯಾ ಖಾನ್ 23ಕ್ಕೆ3) ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 101  (ನಿಜರ್ ಸುಲ್ತಾನಾ  ಔಟಾಗದೆ 51, ರೇಣುಕಾ ಸಿಂಗ್ 18ಕ್ಕೆ3, ಪೂಜಾ ವಸ್ತ್ರಾಕರ್ 25ಕ್ಕೆ2)  ಫಲಿತಾಂಶ: ಭಾರತಕ್ಕೆ 44 ರನ್‌ಗಳ ಜಯ.

ಪಾಕ್ ತಂಡಕ್ಕೆ ಕರ್ಸ್ಟನ್ ಕೋಚ್

ಲಾಹೋರ್ (ಪಿಟಿಐ): ಪಾಕಿಸ್ತಾನದ ಏಕದಿನ ಹಾಗೂ ಟಿ20 ತಂಡಗಳಿಗೆ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಟೆಸ್ಟ್ ತಂಡಕ್ಕೆ ಆಸ್ಟ್ರೇಲಿಯಾದ ಜೇಸನ್ ಗಿಲೆಸ್ಪಿ ಕೋಚ್ ಆಗಿ ಕಾರ್ಯನಿರ್ವಹಿಸುವರು. 

ಈ ನೇಮಕದ ಕುರಿತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಭಾನುವಾರ  ಪ್ರಕಟಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT