ಬ್ಯಾಂಕಾಕ್ (ಪಿಟಿಐ): ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಥಾಯ್ಲೆಂಡ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ಶನಿವಾರ ಫೈನಲ್ ತಲುಪಿದರು.

ಸಾತ್ವಿಕ್–ಚಿರಾಗ್ ಜೋಡಿ 21–11, 21–12 ರಲ್ಲಿ ನೇರ ಗೇಮ್ಗಳಿಂದ ಲು ಮಿಂಗ್-ಚೆ ಮತ್ತು ಟ್ಯಾಂಗ್ ಕೈ-ವೀ (ಚೀನಾ ತೈಪೆ) ಜೋಡಿಯನ್ನು ಸೋಲಿಸಲು ಕೇವಲ 35 ನಿಮಿಷ ತೆಗೆದುಕೊಂಡಿತು.

ಭಾರತದ ಜೋಡಿ, ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಚೀನಾದ ಚೆನ್ ಬೋ ಯಾಂಗ್ ಮತ್ತು ಲಿಯು ಯಿ ವಿರುದ್ಧ ಸೆಣಸಲಿದೆ. ಚೀನಾ ಜೋಡಿಯು ಶನಿವಾರ ನಡೆದ ಮತ್ತೊಂದು ಸೆಮಿಫೈನಲ್ನಲ್ಲಿ ಕಿಮ್ ಜಿ ಜಂಗ್ ಮತ್ತು ಕಿಮ್ ಸಾ ರಂಗ್ (ದಕ್ಷಿಣ ಕೊರಿಯಾ) ಜೋಡಿಯನ್ನು 21-19, 21-18 ರಿಂದ ಸೋಲಿಸಿತು.

ಮಹಿಳಾ ಡಬಲ್ಸ್ನಲ್ಲಿ ನಾಲ್ಕನೇ ಶ್ರೇಯಾಂಕದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಸೆಮಿಫೈನಲ್ನಲ್ಲಿ ನಿರಾಸೆ ಅನುಭವಿಸಿತು. ಭಾರತದ ಆಟಗಾರ್ತಿಯರು 12–21, 20–22ರಿಂದ ಅಗ್ರ ಶ್ರೇಯಾಂಕದ ಜೊಂಗ್ಕೋಲ್ಫಾನ್ ಕಿತರಕುಲ್ ಮತ್ತು ರವಿಂದಾ ಪ್ರಜೋಂಗ್ಜೈ (ಥಾಯ್ಲೆಂಡ್) ಜೋಡಿಗೆ ಮಣಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.