ನವದೆಹಲಿ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಐವರು ಬಾಕ್ಸರ್‌ಗಳು ಪೋಲೆಂಡ್‌ನ ಕಿಯೆಲ್ಸೆಯಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಏಷ್ಯನ್ ಬೆಳ್ಳಿ ಪದಕ ವಿಜೇತ ಅಂಕಿತ್ ನರ್ವಾಲ್ (64 ಕೆಜಿ ತೂಕ ವಿಭಾಗ), ಬಿಶ್ವಾಮಿತ್ರ ಚೋಂಗ್ಥಮ್ (49 ಕೆಜಿ), ಸಚಿನ್ (56 ಕೆಜಿ) ಹಾಗೂ ವಿಶಾಲ್ ಗುಪ್ತಾ (91 ಕೆಜಿ), ಮಹಿಳೆಯರಲ್ಲಿ ಗೀತಿಕಾ (48 ಕೆಜಿ) ಎಂಟರಘಟ್ಟಕ್ಕೆ ಲಗ್ಗೆಯಿಟ್ಟವರು.

ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಗೀತಿಕಾ 5–0ಯಿಂದ ಕಜಕಸ್ತಾನದ ಅರಾಯ್‌ಲಿಮ್ ಮಾರಟ್ ಅವರನ್ನು ಮಣಿಸಿದರು.

ಚೋಂಗ್ಥಮ್ ಅವರು ಮಹಿದಿ ಕೊಶ್ರೊಶಾಹಿ ಎದುರು, ಸಚಿನ್ ಅವರು ಡೇವಿಡ್ ಜಿಮೆನೆಜ್ ವಿರುದ್ಧ 5–0 ಅಂತರದಿಂದಲೇ ಗೆಲುವು ಸಾಧಿಸಿದರು.

ಅಂಕಿತ್ 4–1ರಿಂದ ಪೋಲೆಂಡ್‌ನ ಆಲಿವರ್ ಜಮೊಯಿಸ್ಕಿ ವಿರುದ್ಧ ಜಯಿಸಿದರೆ, ವಿಶಾಲ್ ಅವರು ಕ್ರೊವೇಷ್ಯಾದ ಬಾರ್ನಾ ಲೊನ್ಕಾರಿಚ್ ಅವರ ಸವಾಲು ಮೀರಿ ಮುನ್ನಡೆದರು.

64 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ನಿಶಾ ಅವರ ಅಭಿಯಾನ ಅಂತ್ಯವಾಯಿತು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅವರು 1–4ರಿಂದ ಲಾಟ್ವಿಯದ ಬೀಟ್‌ರೈಸ್ ರೋಜಂಟೇಲ್ ಎದುರು ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.