ಭಾನುವಾರ, ಜೂನ್ 7, 2020
28 °C

ಪ್ರೊ ಕಬಡ್ಡಿ: ಪ್ಯಾಂಥರ್ಸ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ದೀಪಕ್ ನಿವಾಸ್ ಹೂಡಾ ಅವರ ಮಿಂಚಿನ ಆಟದಿಂದ  ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವು ಭಾನುವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವು 37–24ರಿಂದ ತಮಿಳ್ ತಲೈವಾಸ್ ವಿರುದ್ಧ ಗೆದ್ದಿತು.  ಸುನಿಲ್ ಸಿದ್ಧಗವಳಿ ಅವರು ಟ್ಯಾಕಲ್‌ನಲ್ಲಿ ಐದು ಮತ್ತು ರೇಡಿಂಗ್‌ನಲ್ಲಿ ಒಂದು ಪಾಯಿಂಟ್ ಗಳಿಸಿದರು. 

ಆನಂದ್ ಪಾಟೀಲ ಅವರು ರೇಡಿಂಗ್‌ನಲ್ಲಿ ಐದು ಅಂಕ ಪಡೆದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸಂದೀಪ್ ಧೂಲ್ ಮತ್ತು ಸಂತಾಪಣಸಿವಂ ಅವರು ತಲಾ ಮೂರು ಪಾಯಿಂಟ್‌ಗಳನ್ನು ಪಡೆದು ತಂಡದ ಬಲ ಹೆಚ್ಚಿಸಿದರು. ತಲೈವಾಸ್ ತಂಡದ ಸುಕೇಶ್ ಹೆಗ್ಡೆ ಅವರು ಆರು ಪಾಯಿಂಟ್‌ಗಳನ್ನು ಗಳಿಸಿದರು. ವಿಕ್ಟರ್ ಒಬೆರಾಯ್ ಐದು ಅಂಕ ಗಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.