ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟರ ಘಟ್ಟದ ಸನಿಹ ಕರ್ನಾಟಕ

ರಣಜಿ ಟ್ರೋಫಿ ಕ್ರಿಕೆಟ್: ಶ್ರೇಯಸ್, ರೋನಿತ್ ದಾಳಿಗೆ ಉರುಳಿದ ಛತ್ತೀಸಗಡ
Last Updated 2 ಜನವರಿ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ರೋನಿತ್ ಮೋರೆ ಮತ್ತು ಶ್ರೇಯಸ್ ಗೋಪಾಲ್ ಅವರು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ಚಹಾ ವಿರಾಮದ ನಂತರ ತೋರಿಸಿದ ಕೈಚಳಕಕ್ಕೆ ಕರ್ನಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಹೊಸ್ತಿಲಿಗೆ ಬಂದು ನಿಂತಿದೆ.

ನಾಯಕ ಮನೀಷ್ ಪಾಂಡೆ ಅಜೇಯ ಶತಕದ ಬಲದಿಂದ ಕರ್ನಾಟಕ ತಂಡವು ಛತ್ತೀಸಗಡಕ್ಕೆ 355 ರನ್‌ಗಳ ಗೆಲುವಿನ ಗುರಿಯನ್ನು ನೀಡಿತ್ತು. ತಂಡವು ಈ ಕಠಿಣ ಗುರಿಯನ್ನು 72 ಓವರ್‌ಗಳಲ್ಲಿ ಸಾಧಿಸಬೇಕಿತ್ತು. ಆದರೆ, ತಂಡವು 57
ಓವರ್‌ಗಳಲ್ಲಿ 156 ರನ್‌ ಮಾತ್ರ ಗಳಿಸಿತು. 198 ರನ್‌ಗಳಿಂದ ಗೆದ್ದ ಆತಿಥೇಯ ತಂಡವು ಒಟ್ಟು 27 ಪಾಯಿಂಟ್‌ಗಳೊಂ
ದಿಗೆ ಅಂಕಪಟ್ಟಿಯ ಎರಡನೇ ಸ್ಥಾನಕ್ಕೇರಿದೆ. ಹಾಲಿ ಚಾಂಪಿಯನ್ ವಿದರ್ಭ (28 ಪಾಯಿಂಟ್) ಮೊದಲ ಸ್ಥಾನದಲ್ಲಿದೆ. ಕರ್ನಾಟಕ ತಂಡವು ತನ್ನ ಕೊನೆಯ ಪಂದ್ಯವನ್ನು ಇದೇ 7ರಿಂದ ಬರೋಡಾ ವಿರುದ್ಧ ವಡೋದರದಲ್ಲಿ ಆಡಲಿದೆ.

ಎಂಬತ್ತನಾಲ್ಕು ಎಸೆತಗಳು, ಏಳು ವಿಕೆಟ್‌ಗಳು: ಗುರಿ ಬೆನ್ನಟ್ಟಿದ ಛತ್ತೀಸಗಡದ ಬ್ಯಾಟ್ಸ್‌ಮನ್‌ಗಳು ಚಹಾ ವೇಳೆಯವರೆಗೂ ತಾಳ್ಮೆಯಿಂದ ಆಡಿದರು. ತಂಡವು 42.3 ಓವರ್‌ಗಳಲ್ಲಿ 117 ರನ್ ಗಳಿಸಿ ಮೂರು ವಿಕೆಟ್‌ ಮಾತ್ರ ಕಳೆದುಕೊಂಡಿ
ತ್ತು. ಇದರಿಂದಾಗಿ ಪಂದ್ಯವು ಡ್ರಾ ಆಗುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ವಿರಾಮದ ನಂತರ ಕೇವಲ 14.3 ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. ಮಧ್ಯಮವೇಗಿ ರೋನಿತ್ ಮೋರೆ (35ಕ್ಕೆ4) ಮತ್ತು ಸ್ಪಿನ್ನರ್ ಶ್ರೇಯಸ್ ಗೋಪಾಲ್ (44ಕ್ಕೆ4) ಅವರ ಕೈಚಳಕದಿಂದ ಏಳು ವಿಕೆಟ್‌ಗಳು ಪತನವಾದವು. ಚಹಾ ವಿರಾಮಕ್ಕೂ ಕೆಲವೇ ಕ್ಷಣಗಳ ಮುನ್ನ ಬ್ಯಾಟ್ಸ್‌ಮನ್ ಮನೋಜ್ ಸಿಂಗ್ ಅವರು ರೋನಿತ್ ಎಸೆತವನ್ನು ಹೊಡೆದರು. ಕೆಳಮಟ್ಟದಲ್ಲಿ ಸಾಗಿದ ಚೆಂಡನ್ನು ಶಾರ್ಟ್‌ ಮಿಡ್‌ವಿಕೆಟ್‌ನಲ್ಲಿದ್ದ ಬದಲೀ ಫೀಲ್ಡರ್ ಜೆ. ಸುಚಿತ್ ಡೈವ್ ಮಾಡಿ ಹಿಡಿತಕ್ಕೆ ಪಡೆದರು. ತಂಡದಲ್ಲಿ ಸಂಭ್ರಮ ಗರಿಗೆದರಿತು. ನಂತರದ ಅವಧಿಯಲ್ಲಿ ನೆಲಕಚ್ಚಿ ಆಡುತ್ತಿದ್ದ ಅಮನದೀಪ್ ಖರೆ, ಅರ್ಧಶತಕ ಬಾರಿಸಿದ್ದ ಆರಂಭಿಕ ಆಟಗಾರ ಅವಿನಾಶ್ ಧಲಿವಾಲ್ (61 ರನ್), ವಿಶಾಲ್ ಕುಶ್ವಾಹ್ ಮತ್ತು ಅಜಯ್ ಮಂಡಲ್ ಅವರ ವಿಕೆಟ್‌ಗಳನ್ನು ಶ್ರೇಯಸ್ ಕಬಳಿಸಿದರು. ಇನ್ನೊಂದು ಬದಿಯಿಂದ ರೋನಿತ್ ಅವರು ಹರಪ್ರೀತ್ ಸಿಂಗ್. ಶಿವೇಂದ್ರಸಿಂಗ್ ಮತ್ತು ಪಂಕಜ್ ರಾವ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು.

15ನೇ ಓವರ್‌ನಲ್ಲಿ ಓಂಕಾರ್ ವರ್ಮಾ ಅವರನ್ನು ಶ್ರೇಯಸ್ ರನ್‌ಔಟ್ ಮಾಡಿದರು. ಜಯದ ಸಂಭ್ರಮ ಗರಿಗೆದರಿತು.

80 ನಿಮಿಷಗಳ ಆಟ: ಕೊನೆಯ ದಿನದ ಬೆಳಿಗ್ಗೆ ಕರ್ನಾಟಕ ತಂಡವು ಬೆಳಗಿನ 80 ನಿಮಿಷಗಳಲ್ಲಿ 106 ರನ್‌ಗಳನ್ನು ಸೇರಿಸಿತು. ಮಂಗಳವಾರ 57 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಮನೀಷ್ ಶತಕದ ಗಡಿ ಮುಟ್ಟಿದರು. ಶ್ರೇಯಸ್ ಗೋಪಾಲ್,
ಆರ್.ವಿನಯಕುಮಾರ್‌ ಮತ್ತು ಕೆ.ಗೌತಮ್ ಔಟಾದ ನಂತರ ಕ್ರೀಸ್‌ಗೆ ಬಂದ ಅಭಿಮನ್ಯು ಮಿಥುನ್ 17 ಎಸೆತಗಳಲ್ಲಿ 33 ರನ್‌ ಗಳಿಸಿದರು. ಅದರಲ್ಲಿ ಅವರು ಮೂರು ಬೌಂಡರಿ ಮತ್ತು ಎರಡು ಆಕರ್ಷಕ ಸಿಕ್ಸರ್‌ಗಳನ್ನು ಸಿಡಿಸಿದರು. ಮನೀಷ್ ಶತಕ ಪೂರೈಸುತ್ತಿದ್ದಂತೆಯೇ ಇನಿಂಗ್ಸ್‌ ಡಿಕ್ಲೇರ್‌ಮಾಡಿಕೊಂಡರು.ತಂಡವುಎರಡನೇಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳಿಗೆ 219 ರನ್ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT