ವಿಧಾನ: 1) ಚಿತ್ರದಲ್ಲಿ ತೋರಿಸಿದಂತೆ ಒಂದೇ ಅಳತೆಯ ಒಂದು, ಎರಡು ಹಾಗೂ ಮೂರು ಮೋಂಬತ್ತಿಗಳನ್ನು ಹಚ್ಚಿ ಟೇಬಲ್ ಮೇಲೆ ಇಡಿ. ಅವುಗಳಿಗೆ ಅ, ಬ, ಕ ಎಂದು ಹೆಸರಿಸಿರಿ.
2) ಒಂದೇ ವೇಳೆಗೆ ಚಿತ್ರದಲ್ಲಿ ತೋರಿಸಿದಂತೆ, ಒಂದೇ ಗಾತ್ರಗಳ ಗಾಜಿನ ಗ್ಲಾಸುಗಳನ್ನು, ಮೋಂಬತ್ತಿಗಳ ಮೇಲೆ ನಿಮ್ಮ ಸ್ನೇಹಿತರ ಸಹಾಯದಿಂದ ಬೋರಲು ಹಾಕಿರಿ.
ಪ್ರಶ್ನೆ: 1) ಯಾವ ಮೋಂಬತ್ತಿಗಳು ಮೊದಲು ಹಾಗೂ ಯಾವ ಮೋಂಬತ್ತಿ ಕೊನೆಗೆ ನಂದುತ್ತವೆ? ಯಾಕೆ?
ಉತ್ತರ: 1) ‘ಕ’ ಗ್ಲಾಸಿನ ಕೆಳಗಿರುವ ಮೋಂಬತ್ತಿಗಳು ಮೊದಲು ಹಾಗೂ ‘ಅ’ ಗ್ಲಾಸಿನ ಕೆಳಗಿರುವ ಮೋಂಬತ್ತಿ ಕೊನೆಗೆ ನಂದುತ್ತವೆ. ಮೋಂಬತ್ತಿ ಉರಿಯಲು ಆಕ್ಸಿಜನ್ ಅನಿಲದ ಅವಶ್ಯಕತೆ ಇದೆ.
ಎಲ್ಲ ಗ್ಲಾಸುಗಳು ಒಂದೇ ಗಾತ್ರದವು ಇರುವುದರಿಂದ ಅವುಗಳಲ್ಲಿಯ ಆಕ್ಸಿಜನ್ ಸಮ ಪ್ರಮಾಣದಲ್ಲಿರುತ್ತದೆ. ಮೂರು ಮೋಂಬತ್ತಿಗಳು ಉರಿಯಲಿಕ್ಕೆ ಹೆಚ್ಚು ಆಕ್ಸಿಜನ್ ಅನಿಲ ಬೇಕಲ್ಲವೇ? ಹಾಗಾಗಿ ‘ಕ’ ದಲ್ಲಿ ಹೆಚ್ಚು ಆಕ್ಸಿಜನ್ ಬಳಕೆಯಾಗಿ, ಮೋಂಬತ್ತಿಗಳು ಮೊದಲು ನಂದುತ್ತವೆ.