ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಲಿ ಮುಳುಗುವ ಕಿತ್ತಳೆ

ಮಾಡಿ ನಲಿ ಸರಣಿ –75
Last Updated 17 ಆಗಸ್ಟ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಬೇಕಾಗುವ ಸಲಕರಣೆಗಳು: ಗ್ಲಾಸು, ನೀರು, ಕಿತ್ತಳೆ.

ವಿಧಾನ: ಒಂದು ಗ್ಲಾಸಿನ ತುಂಬ ನೀರು ತೆಗೆದುಕೊಳ್ಳಿರಿ. ಸಿಪ್ಪೆಯನ್ನು ತೆಗೆಯದ ಕಿತ್ತಳೆಯನ್ನು ನೀರಿನಲ್ಲಿ ಇಳಿಬಿಡಿರಿ
(ಚಿತ್ರ-1), ಸಿಪ್ಪೆಯನ್ನು ತೆಗೆದು ಕಿತ್ತಳೆಯನ್ನು ನೀರಿಗೆ ಇಳಿಬಿಡಿರಿ
(ಚಿತ್ರ-2).
ಪ್ರಶ್ನೆ:  1) ಸಿಪ್ಪೆಯನ್ನು ತೆಗೆಯದ ಕಿತ್ತಳೆಯನ್ನು ನೀರಿನಲ್ಲಿ ಹಾಕಿದಾಗ ಏನಾಗುತ್ತದೆ? ಯಾಕೆ?
     2) ಸಿಪ್ಪೆಯನ್ನು ತೆಗೆದ ಕಿತ್ತಳೆಯನ್ನು ನೀರಿಗೆ ಹಾಕಿದಾಗ ಏನಾಗುತ್ತದೆ? ಯಾಕೆ?

3) ಜಲಸಸ್ಯಗಳು ಯಾಕೆ ತೇಲುತ್ತವೆ?

ಉತ್ತರ
1) ಸಿಪ್ಪೆಯನ್ನು ತೆಗೆಯದ ಕಿತ್ತಳೆಯನ್ನು ನೀರಿನಲ್ಲಿ ಹಾಕಿದಾಗ ಅದು ತೇಲುತ್ತದೆ. ಯಾಕೆಂದರೆ ಸಿಪ್ಪೆಯಲ್ಲಿ ತೈಲ ಗ್ರಂಥಿಗಳ ಜೊತೆಗೆ ಕೆಲವು ಕೋಶಗಳಲ್ಲಿ ಗಾಳಿಯೂ ಶೇಖರಣೆಯಾಗಿರುತ್ತದೆ.
2) ಸಿಪ್ಪೆಯನ್ನು ತೆಗೆದಾಗ ಗಾಳಿಯು ಇಲ್ಲವಾಗಿ ಕಿತ್ತಳೆ ತೇಲುತ್ತದೆ.
3) ಎಲ್ಲ ಜಲಸಸ್ಯಗಳ ಕೋಶಗಳಲ್ಲಿ ಗಾಳಿಯು ಶೇಖರಣೆಯಾಗಿರು ವುದರಿಂದ ಅವು ತೇಲುತ್ತವೆ.
ಹೊಸದಾಗಿ ಈಜು ಕಲಿಯುವವರು, ಖಾಲಿ ಡಬ್ಬಿಯ ಬಾಯಿಯನ್ನು ಬೆಸೆದು, ತಮ್ಮ ಸೊಂಟಕ್ಕೆ ಕಟ್ಟಿಕೊಂಡು ನೀರಿಗಿಳಿಯುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮೀನು ನೀರಿನಲ್ಲಿ ಮೇಲೆ ಕೆಳಗೆ ಹೋಗುವುದು ಗಾಳಿ ಚೀಲಗಳ ಸಹಾಯದಿಂದಲೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT