ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ಗಜರ ಹೆಜ್ಜೆಗುರುತುಗಳು

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಉಸೇನ್ ಬೋಲ್ಟ್‌ ಮತ್ತು ಮೊ ಫರ‍್ಹಾ ಜಗತ್ತಿನ ಅಥ್ಲೆಟಿಕ್ಸ್‌ ಅಂಗಳದಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ.  ಜಮೈಕಾದ ಬೋಲ್ಟ್‌ ಲಂಡನ್‌ನಲ್ಲಿ  ಈಚೆಗೆ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 100 ಮೀಟರ್ಸ್‌ ಓಟದಲ್ಲಿ ಕಂಚಿನ ಪದಕ ಪಡೆದು ವಿದಾಯ ಹೇಳಿದ್ದಾರೆ. ಆದರೆ 9.58 ಸೆಕೆಂಡುಗಳ ವಿಶ್ವದಾಖಲೆ ಇನ್ನೂ ಅಬಾಧಿತವಾಗಿದೆ.

ದೂರ ಅಂತರದ ಓಟದ (5000 ಮೀ ಮತ್ತು 10000 ಮೀ) ಮೋಡಿಗಾರ ಮೊಹಮ್ಮದ್ ಫರ‍್ಹಾ ಅವರೂ ಆಥ್ಲೆಟಿಕ್ಸ್‌ ಅಂಗಳಕ್ಕೆ ವಿದಾಯ ಹೇಳಿದ್ದಾರೆ. ಫರ‍್ಹಾ ಅವರ ದಾಖಲೆಯೂ ಅನನ್ಯ. ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನದ ಪದಕಗಳು ಅವರ ಖಾತೆಯಲ್ಲಿವೆ.  ಈ ಇಬ್ಬರೂ ದಿಗ್ಗಜರಿಗೆ ಲಂಡನ್ ವಿಶ್ವ ಅಥ್ಲೆಟಿಕ್ಸ್‌ ಕೊನೆಯ ಕೂಟವಾಗಿತ್ತು.

**

ಉಸೇನ್ ಬೋಲ್ಟ್ ವಿಶಿಷ್ಟ ಶೈಲಿ

*

ಶರವೇಗದ ಸರದಾರ ಉಸೇನ್ ಬೋಲ್ಟ್‌ ಅಭಿಮಾನಿಗಳ ದಂಡು

*

5000 ಮೀಟರ್ಸ್‌ ಓಟದ ದಿಗ್ಗಜ ಮೊ ಫರ‍್ಹಾ ಅವರ ಕುಟುಂಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT