ಬೇಕಾಗುವ ಸಾಮಗ್ರಿಗಳು: ಮೂರು ಪ್ರನಾಳಗಳು, ಸತುವಿನ ತುಂಡು(Zn), ಅಮೃತಶಿಲೆಯ ಚೂರುಗಳು(CaCO3), ಹೈಡ್ರೊ ಕ್ಲೊರಿಕ್ ಆಮ್ಲ (HCl), ಪೊಟ್ಯಾಸಿಯಂ ಕ್ಲೊರೇಟ್(KClO3), ಬೂದಿ, ಬೆಂಕಿ ಪೆಟ್ಟಿಗೆ,

ವಿಧಾನ: ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ. ಮೊದಲ ಪ್ರನಾಳದಲ್ಲಿ ಸತುವಿನ ತುಂಡುಗಳನ್ನು ಹಾಗೂ ಎರಡನೆಯದರಲ್ಲಿ ಅಮೃತಶಿಲೆಯ ಚೂರುಗಳನ್ನು ಹಾಕಿ ಅವಕ್ಕೆ ೫ ಸಿಸಿ ದುರ್ಬಲ ಹೈಡ್ರೊಕ್ಲೊರಿಕ್ ಆಮ್ಲವನ್ನು ಹಾಕಿ. 3ನೇ ಪ್ರನಾಳದಲ್ಲಿ ಸ್ವಲ್ಪ ಪೊಟ್ಯಾಸಿಯಂ ಕ್ಲೊರೇಟನ್ನು ಬೂದಿಯೊಂದಿಗೆ ಬೆರಸಿ ಹಾಕಿ.

ಪ್ರಶ್ನೆ:
1. ಮೊದಲ ಪ್ರನಾಳದ ಬಾಯಿಯನ್ನು ಹೆಬ್ಬೆರಳಿನಿಂದ ಮುಚ್ಚಿ ಜೋರಾಗಿ ಅಲುಗಾಡಿಸಿ. ತಕ್ಷಣ ಅದರ ಬಾಯಿ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿಬಿಟ್ಟು ನೋಡಿ. ಏನಾಯಿತು?

2. ಎರಡನೆಯ ಪ್ರನಾಳದ ಬಾಯಿಯ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿ ಬಿಡಿ. ಏನಾಯಿತು?

3. ಮೂರನೆಯ ಪ್ರನಾಳವನ್ನು ಕಾಯಿಸಿ, ಅನಂತರ ಅದರಲ್ಲಿ ಜ್ವಾಲೆ ರಹಿತ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಬಿಡಿ. ಏನಾಯಿತು? ಯಾಕೆ?

ಉತ್ತರ: 1. ಮೊದಲ ಪ್ರನಾಳದಲ್ಲಿ ಹೈಡ್ರೊಜನ್ ಅನಿಲವು ಬಿಡುಗಡೆ ಯಾಗುತ್ತದೆ. Zn+2 HCl → ZnCl2 + H2 ಹೈಡ್ರೊಜನ್ ದಹನಕಾರಿ ಅನಿಲವಾದ್ದರಿಂದ ಪ್ರನಾಳದ ಬಾಯಿಯ ಹತ್ತಿರ ಉರಿಯುವ ಬೆಂಕಿ ಕಡ್ಡಿ ಹಿಡಿದಾಗ ಸ್ಫೋಟದ ಶಬ್ದ ಬರುತ್ತದೆ.

2. ಎರಡನೆಯ ಪ್ರನಾಳದಲ್ಲಿ ಕಾರ್ಬನ್‌ಡೈಆಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ. CaCO3 + 2 HCl → CaCl2+CO2+H2O.
ಇದು ಬೆಂಕಿಯನ್ನು ಆರಿಸುತ್ತದೆ.

3. ಮೂರನೆಯ ಪ್ರನಾಳದಲ್ಲಿ ಆಕ್ಸಿಜನ್ ಅನಿಲ ಬಿಡುಗಡೆಯಾಗುತ್ತದೆ. ಇದು ದಹನ ಕ್ರಿಯೆಗೆ ಸಹಕಾರಿ. ಆದ್ದರಿಂದ ಬೆಂಕಿ ಕಡ್ಡಿ ಜ್ವಾಲೆಯಾಗಿ ಉರಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.