ಭಾನುವಾರ, ಫೆಬ್ರವರಿ 23, 2020
19 °C
Acer Predator Pub-G

ಪಬ್‌ ಜೀ ಅಡಿಕ್ಷನ್‌ ಅಲ್ಲ, ಇ–ಸ್ಪೋರ್ಟ್‌

ಪ್ರಫುಲ್ಲ Updated:

ಅಕ್ಷರ ಗಾತ್ರ : | |

Prajavani

ಮಹಾದೇವಪುರದಲ್ಲಿರುವ ಫಿನಿಕ್ಸ್‌ ಮಾಲ್‌ನಲ್ಲಿ ಎಸರ್‌ ಕಂಪ್ಯೂಟರ್‌ ವತಿಯಿಂದ ಏಷಿಯಾ ಪೆಸಿಫಿಕ್‌ ಪ್ರೀಡಿಯೇಟರ್‌ ಗೇಮಿಂಗ್‌ ಲೀಗ್‌– ಪಬ್‌ ಜೀ ಟೂರ್ನಮೆಂಟ್‌ನ್ನು ಆಯೋಜಿಸಲಾಗಿತ್ತು. ಡಿ.7 ರಂದು ನಡೆದ ಪಬ್‌ ಜೀ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 4 ಜನರ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ ತಂಡ, ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಪಬ್‌–ಜೀ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 

ಪಬ್‌ ಜೀ ಮಾರ್ಕೆಟ್‌ಗೆ ಲಗ್ಗೆ ಇಟ್ಟ ದಿನದಿಂದ ನಕಾರತ್ಮಕ ಅಭಿಪ್ರಾಯಗಳು ಹೆಚ್ಚಾಗುತ್ತಿವೆ. ಯುವಕರು ಪಬ್‌ ಜೀಗೆ ಅಡಿಕ್ಟ್‌ ಆಗಿ ಹೊಡೆದಾಟದ ಹಾದಿ ಹಿಡಿಯುತ್ತಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಪಬ್‌ ಜೀ ಕೇವಲ ಎಂಟರ್‌ಟೈನ್‌ಮೆಂಟ್ ಅಷ್ಟೇ ಅಲ್ಲ ಇದರಲ್ಲೂ ಇ–ಸ್ಪೋರ್ಟ್‌ ಮಾದರಿಯಲ್ಲಿ ಭವಿಷ್ಯ ರೂಪಿಸಬಹುದೆಂಬ ಉದ್ದೇಶದಿಂದ ಎಸರ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಪ್ಯೂಟರ್‌ನಲ್ಲಿ ಪಬ್‌ ಜೀ ಟೂರ್ನಮೆಂಟ್‌ ಅನ್ನು ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ. 

ಶನಿವಾರ ನಡೆದ ಪ್ರೀಡಿಯೇಟರ್‌ ಗೇಮಿಂಗ್‌ ಲೀಗ್‌ನಲ್ಲಿ ಮುಂಬೈ, ಕೊಲ್ಕತ್ತ, ಚೆನ್ನೈ, ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ಭಾರತದ ಪಬ್‌–ಜೀ ತಂಡ ಆಯ್ಕೆ ಪ್ರಕ್ರಿಯೆ ನವೆಂಬರ್‌ 23 ರಿಂದ 30 ತನಕ ನಡೆದಿತ್ತು. 2245 ಕ್ಕೂ ಹೆಚ್ಚು ಆಟಗಾರರು ಮತ್ತು 449 ತಂಡಗಳು ಆನ್‌ಲೈನ್‌ ರಿಜಿಸ್ಟ್ರೇಶನ್‌ ಮಾಡಿಕೊಂಡಿದ್ದವು. 449 ತಂಡಗಳ ನಡುವೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಅತಿ ಹೆಚ್ಚು ಪಾಯಿಂಟ್ಸ್‌ ಗಳಿಸಿದ 16 ತಂಡಗಳನ್ನು ಭಾರತದ ಫಿನಾಲೆ ಸುತ್ತಿಗೆ ಆರಿಸಲಾಯಿತು. 

ಫಿನಾಲೆ ಸ್ಪರ್ಧೆಯಲ್ಲಿ ಒಟ್ಟು 5 ಸುತ್ತುಗಳಲ್ಲಿದ್ದವು. 5 ರೌಡ್‌ಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ತಂಡವನ್ನು ವಿಜೇತ ಎಂದು ಆರಿಸಲಾಗಿದೆ. ವಿಶೇಷ ಪ್ರೀಡಿಯೇಟರ್‌ ತ್ರೋನ್ಸ್‌ ಗೇಮಿಂಗ್‌ ಚೇರ್‌ನಲ್ಲಿ ಪಬ್‌ ಜೀನ ಮಿರಾಮರ್, ಸ್ಯಾನ್‌ಹಾಕ್‌, ಇರ್‍ಯಾಗಲ್‌, ವೀಕೆಂಡಿ ಬ್ಯಾಟಲ್‌ ಫೀಲ್ಡ್‌ಗಳಲ್ಲಿ ಸ್ಪರ್ಧೆ ನಡೆಯಿತು. ಒಟ್ಟು 16 ತಂಡಗಳು (ಟೆಗ್‌ ಇ–ಸ್ಪೋರ್ಟ್‌, ಇಂಡಿಯನ್‌ ರೈವಲ್ಸ್‌, ಗ್ಲೋಬಲ್ ಇ–ಸ್ಪೋಟ್ಸ್‌, 4 ರ‍್ಯಾಡಮ್‌, ಟ್ರ್ಯಾಟಂ ಇ–ಸ್ಪೋಟ್ಸ್‌, 4ಎಫ್‌, ಲೆವಲ್‌ ಝೀರೋ, ಡಿಸ್ಟ್ರಿಕ್ಟ್‌ 9, ಎಕ್ಸ್‌ಗಾಡ್ಸ್‌, ಕ್ರೂಸ್ಯಾಡರ್ಸ್‌, 4 ಪಿಕ್ಸೆಲ್‌, ವೀಕೆಂಡ್‌ ವಾರಿಯರ್‌, ನವೀ ಎಂ4, ಎಡಬ್ಲ್ಯೂ, ಕಿಂಗ್ಸ್‌ಮೆನ್‌, ಒನ್‌ ಎಂಬವ್‌ ಆಲ್‌) ಪರಸ್ಪರ  ಸೆಣಸಾಡಿದವು. 

ಇಂಡಿಯನ್‌ ರೈವಲ್ಸ್‌ 49 ಕಿಲ್ಸ್‌ ಮತ್ತು 79 ಅಂಕಗಳೊಂದಿಗೆ ವಿಜೇತರಾಗಿ ಹೊರಹೊಮ್ಮಿದ್ದಾರೆ. ವಿನ್ನರ್ಸ್‌ ₹15 ಲಕ್ಷ ನಗದು ಬಹುಮಾನ ತಮ್ಮದಾಗಿಸಿ ಕೊಂಡಿದ್ದಾರೆ. ವಿಶೇಷವೆಂದರೆ ಇಂಡಿಯನ್‌ ರೈವಲ್ಸ್‌ ತಂಡದ ಒಬ್ಬ ಸದಸ್ಯ ಬೆಂಗಳೂರು ನಿವಾಸಿ. ಫಿಲಿಫ್ಪೀನ್ಸ್‌ನಲ್ಲಿ ಫೆಬ್ರವರಿ ತಿಂಗಳಲ್ಲಿ 19 ದೇಶಗಳು ಮುಖಾಮುಖಿಯಾಗಲಿವೆ. ವಿಜೇತರಿಗೆ 400 ಸಾವಿರ ಡಾಲರ್‌ ನಗದು ಬಹುಮಾನ ದೊರಯಲಿದೆ.

v

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)