ಮಂಗಳವಾರ, ಮಾರ್ಚ್ 31, 2020
19 °C

ಎಎಫ್‌ಸಿ ಕಪ್‌: ಚೆನ್ನೈಯಿನ್‌ ಎಫ್‌ಸಿ ಮಿನರ್ವಾ ಪಂಜಾಬ್‌ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಎಎಫ್‌ಸಿ ಕಪ್‌ ಫುಟ್‌ಬಾಲ್‌ ‘ಇ’ ಗುಂಪಿನ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಹಾಗೂ ಮಿನರ್ವಾ ಪಂಜಾಬ್‌ ತಂಡಗಳು ಬುಧವಾರ ಮುಖಾಮುಖಿಯಾಗಲಿವೆ. ನಾಕೌಟ್‌ನಲ್ಲಿ ಸ್ಥಾನ ಪಡೆಯುವತ್ತ ಚೆನ್ನೈ ಚಿತ್ತವರಿಸಿದೆ. ಇಲ್ಲಿನ ಇಂದಿರಾಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಬಾಂಗ್ಲಾದೇಶ ಮೂಲದ ಅಬಹಾನಿ ಲಿಮಿಟೆಡ್‌ ಢಾಕಾ ಹಾಗೂ ಚೆನ್ನೈಯಿನ್‌ ಎಫ್‌ಸಿ ತಂಡಗಳು ನಾಲ್ಕು ಪಂದ್ಯಗಳಿಂದ ತಲಾ ಏಳು ಪಾಯಿಂಟ್‌ಗಳನ್ನು ಗಳಿಸಿವೆ. ಪಾಯಿಂಟ್‌ ಪಟ್ಟಿಯಲ್ಲಿ ಚೆನ್ನೈಯಿನ್‌ ಮೊದಲ ಸ್ಥಾನದಲ್ಲಿದೆ. 

ಈ ಪಂದ್ಯದಲ್ಲಿ ಚೆನ್ನೈಯಿನ್‌ ತಂಡ ಗೆದ್ದರೆ ನಾಕೌಟ್‌ ಹಂತಕ್ಕೆ ಸಮೀಪಿಸಲಿದೆ. ಇನ್ನೊಂದೆಡೆ ಎಲ್ಲ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ಮಿನರ್ವಾ, ಪ್ರಥಮ ಬಾರಿ ಎಎಫ್‌ಸಿ ಕಪ್‌ ಗೆಲ್ಲುವತ್ತ ದೃಷ್ಟಿ ಹರಿಸಿದೆ.ಮೇ ತಿಂಗಳಲ್ಲಿ ಕೊನೆಯ ಬಾರಿ ಮಿನರ್ವಾ ಹಾಗೂ ಚೆನ್ನೈಯಿನ್‌ ತಂಡಗಳು ಪಂದ್ಯವನ್ನು ಆಡಿದ್ದವು.

‘ಇ’ ಗುಂಪಿನ ಬುಧವಾರದ ಮತ್ತೊಂದು ಪಂದ್ಯದಲ್ಲಿ ಅಬಹಾನಿ ತಂಡವು ನೇಪಾಳದ ಮನಂಗ್‌ ಮಾರ್ಷಿಯಾಂಗಡಿ ಕ್ಲಬ್‌ ತಂಡವನ್ನು ಎದುರಿಸಲಿದೆ. 

ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆ
ಸ್ಥಳ: ಗುವಾಹಟಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು