ಹಾಕಿ: ಎಸ್‌ಎಐಎಲ್‌ ಅಕಾಡೆಮಿಗೆ ಪ್ರಶಸ್ತಿ

7

ಹಾಕಿ: ಎಸ್‌ಎಐಎಲ್‌ ಅಕಾಡೆಮಿಗೆ ಪ್ರಶಸ್ತಿ

Published:
Updated:

ನವದೆಹಲಿ: ಭಾರತ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಹಾಕಿ ಅಕಾಡೆಮಿ ತಂಡ 115ನೇ ಅಖಿಲ ಭಾರತ ಆಗಾ ಖಾನ್‌ ಗೋಲ್ಡ್‌ ಕಪ್‌ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಪೈಪೋಟಿಯಲ್ಲಿ ಎಸ್‌ಎಐಎಲ್‌ ಅಕಾಡೆಮಿ 2–1 ಗೋಲುಗಳಿಂದ ಆರ್ಮಿ ಇಲೆವನ್‌ ದಾನಾಪುರ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಮಿಂಚಿನ ಆಟ ಆಡಿದ ಉಭಯ ತಂಡಗಳು 1–1ರಲ್ಲಿ ಸಮಬಲ ಸಾಧಿಸಿದ್ದವು. ನಿರ್ಣಾಯಕ ಹಂತದಲ್ಲಿ ಗೋಲು ಹೊಡೆದ ಜಯಪ್ರಕಾಶ್‌ ಪಟೇಲ್‌ ಎಸ್‌ಎಐಎಲ್‌ ಅಕಾಡೆಮಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ನಲ್ಲಿ ಎಸ್‌ಎಐಎಲ್‌ ಅಕಾಡೆಮಿ 4–2 ಗೋಲುಗಳಿಂದ ಮಧ್ಯಪ್ರದೇಶ ತಂಡವನ್ನು ಪರಾಭವಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !