ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಚೆಸ್‌ ಒಲಿಂಪಿಯಾಡ್‌: ಭಾರತ ತಂಡಕ್ಕೆ ಆನಂದ್‌ ನಾಯಕ

Last Updated 31 ಜುಲೈ 2021, 19:34 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅವರು ಸೆಪ್ಟೆಂಬರ್‌ 8 ರಿಂದ 15ರವರೆಗೆ ನಡೆಯಲಿರುವ ಎರಡನೇ ಆನ್‌ಲೈನ್‌ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ವರ್ಷ ಭಾರತ ಮತ್ತು ರಷ್ಯಾ ತಂಡಗಳನ್ನು ಚಾಂಪಿಯನ್‌ಷಿಪ್‌ನ ಜಂಟಿ ವಿಜೇತರೆಂದು ಘೋಷಿಸಲಾಗಿತ್ತು. ಫೈನಲ್‌ ಅಂತಿಮ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು.

ಆನಂದ್‌ ಜೊತೆಗೆ ವಿದಿತ್‌ ಸಂತೋಷ್‌ ಗುಜರಾತಿ, ಪಿ.ಹರಿಕೃಷ್ಣ, ನಿಹಾಲ್‌ ಸರೀನ್, ಆರ್‌.ಪ್ರಗ್ನಾನಂದ, ಕೊನೆರು ಹಂಪಿ, ದ್ರೊಣವಲ್ಲಿ ಹಾರಿಕಾ, ತಾನಿಯಾ ಸಚ್‌ದೇವ್‌, ಭಕ್ತಿ ಕುಲಕರ್ಣಿ, ಆರ್‌.ವೈಶಾಲಿ ಮತ್ತು ಬಿ.ಸವಿತಾ ಶ್ರೀ ಅವರು ತಂಡದಲ್ಲಿದ್ದಾರೆ. ತಂಡದ ಎಲ್ಲ ಆಟಗಾರರು ಚೆನ್ನೈನಲ್ಲಿ ಇರಲಿದ್ದು, ಅಲ್ಲಿಂದಲೇ ಆಡಲಿದ್ದಾರೆ.

ಮೊದಲ ಲೆಗ್‌ನಲ್ಲಿ ಹತ್ತು ತಂಡಗಳು ಪಾಲ್ಗೊಳ್ಳಲಿವೆ. ಉತ್ತಮ ಸಾಧನೆ ತೋರುವ ಎರಡು ತಂಡಗಳು ಫಿಡೆ ನಿರ್ಧರಿಸಲಿರುವ ನಾಕ್‌ಔಟ್‌ ಮಾದರಿಯಲ್ಲಿ ಆಡುವ ಅರ್ಹತೆ ಸಂಪಾದಿಸಲಿವೆ.

ಇಂಟರ್‌ನೆಟ್‌ ಸೇವೆ ಒದಗಿಸುವ ಮೈಕ್ರೊಸೆನ್ಸ್‌ ಈ ಬಾರಿ ಭಾರತ ತಂಡದ ಪ್ರಾಯೋಜಕತ್ವ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT