ಭಾನುವಾರ, ಜುಲೈ 25, 2021
21 °C

ಅಮೆರಿಕ ಮಹಿಳಾ ಗಾಲ್ಫ್‌: ಅನಿಕಾ ಕಣಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಅನಿಕಾ ವರ್ಮಾ ಅವರು ಮುಂಬರುವ ಅಮೆರಿಕ ಮಹಿಳಾ ಅಮೆಚೂರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಈ ಚಾಂಪಿಯನ್‌ಷಿಪ್‌ ಆಗಸ್ಟ್‌ 6ರಿಂದ 9ರವರೆಗೆ ರಾಕ್‌ವಿಲ್ ‌ನಗರದ ವುಡ್‌ಮೊಂಟ್‌ ಕಂಟ್ರಿ ಕ್ಲಬ್‌ನಲ್ಲಿ ಜರುಗಲಿದೆ.

16 ವರ್ಷ ವಯಸ್ಸಿನ ಅನಿಕಾ ಅವರು ಸದ್ಯ ಅಮೆರಿಕದಲ್ಲೇ ನೆಲೆಸಿದ್ದಾರೆ. ರೋಸ್‌ವಿಲ್‌ ನಗರದ ಗ್ರಾನೈಟ್‌ ಬೇ ಶಾಲೆಯಲ್ಲಿ ಅವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  

‘ಕೋವಿಡ್‌ನಿಂದಾಗಿ ಶಾಲೆಗೂ ರಜೆ ನೀಡಲಾಗಿತ್ತು. ಜೊತೆಗೆ ಮಹಿಳಾ ಏಷ್ಯಾ ಪೆಸಿಫಿಕ್‌ ಸೇರಿದಂತೆ ಕೆಲ ಗಾಲ್ಫ್‌ ಚಾಂಪಿಯನ್‌ಷಿಪ್‌ಗಳನ್ನೂ ಮುಂದೂಡಲಾಗಿತ್ತು. ಥಂಡರ್‌ಬರ್ಡ್‌, ಯುಎಸ್‌ಜಿಎ ಕ್ವಾಲಿಫೈಯರ್ಸ್‌, ಐಎಂಜಿ ಜೂನಿಯರ್ ಸೇರಿದಂತೆ ಹಲವು ಟೂರ್ನಿಗಳು ರದ್ದಾಗಿದ್ದರಿಂದ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅಮೆರಿಕ ಅಮೆಚೂರ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ನಾನು ಕ್ಯಾಕ್ಟಸ್‌ ಟೂರ್ನಿಯಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದೆ. ಆ ಟೂರ್ನಿಯಲ್ಲಿ ಆಡಿದ್ದರಿಂದ ಹೊಸ ಕೌಶಲಗಳನ್ನು ಕಲಿಯಲು ಸಾಧ್ಯವಾಗಿತ್ತು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು