ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌: ಭಾರತ ತಂಡಕ್ಕೆ ಬೆಳ್ಳಿ

ಕಂಚು ಜಯಿಸಿದ ಅಂಜುಮ್ ಮೌದ್ಗಿಲ್‌
Last Updated 17 ಜುಲೈ 2022, 12:41 IST
ಅಕ್ಷರ ಗಾತ್ರ

ಚಾಂಗ್ವಾನ್‌: ಸಂಜೀವ್‌ ರಜಪೂತ್‌, ಚೈನ್ ಸಿಂಗ್‌ ಮತ್ತು ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಅವರಿದ್ದ ಭಾರತ ಪುರುಷರ ತಂಡವು ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯ 50 ಮೀಟರ್ಸ್ ರೈಫಲ್‌ ತ್ರಿ ಪೋಸಿಷನ್ಸ್ ತಂಡ ವಿಭಾಗದಲ್ಲಿ ಭಾರತದ ಶೂಟರ್‌ಗಳಿಗೆ ಬೆಳ್ಳಿ ಒಲಿಯಿತು.

ಜಿದ್ದಾಜಿದ್ದಿನ ಫೈನಲ್ ಹಣಾಹಣಿಯು ಭಾರತ ತಂಡದವರು 12–16ರಿಂದ ಜೆಕ್‌ ಗಣರಾಜ್ಯದ ಪೀಟರ್‌ ನಿಂಬರ್‌ಸ್ಕಿ, ಫಿಲಿಪ್‌ ನೆಪೆಚಾಲ್‌ ಮತ್ತು ಜಿರಿ ಪ್ರಿವ್ರಟ್‌ಸ್ಕಿ ಎದುರು ಮಣಿದರು.

ಮಹಿಳೆಯರ 50 ಮೀಟರ್ಸ್ ರೈಫಲ್‌ ತ್ರಿ ಪೋಸಿಷನ್ಸ್‌ ವೈಯಕ್ತಿಕ ವಿಭಾಗದಲ್ಲಿ ಅಂಜುಮ್ ಮೌದ್ಗಿಲ್ ಅವರು ಕಂಚಿನ ಪದಕ ಗೆದ್ದುಕೊಂಡರು. ಫೈನಲ್ ಸುತ್ತಿನಲ್ಲಿ ಅಂಜುಮ್‌ 402.9 ಅಂಕ ಗಳಿಸಿದರು. ಜರ್ಮನಿಯ ಅನ್ನಾ ಜಾನ್ಸೆನ್‌ (407.7 ಅಂಕ) ಚಿನ್ನ ಮತ್ತು ಇಟಲಿಯ ಬಾರ್ಬರಾ ಗ್ಯಾಂಬರೊ (403.4 ಅಂಕ) ಬೆಳ್ಳಿ ಜಯಿಸಿದರು.

ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಅಂಜುಮ್‌, ಶನಿವಾರ ರ‍್ಯಾಂಕಿಂಗ್ ಸುತ್ತಿನಲ್ಲಿ ಆರನೇ ಸ್ಥಾನ ಗಳಿಸಿ ಫೈನಲ್ ತಲುಪಿದ್ದರು.

28 ವರ್ಷದ ಅಂಜುಮ್ ಅವರಿಗೆ ಇದು ಸತತ ಎರಡನೇ ವಿಶ್ವಕಪ್ ಪದಕ. ಕಳೆದ ತಿಂಗಳು ಬಾಕುನಲ್ಲಿ ನಡೆದ ಟೂರ್ನಿಯಲ್ಲಿ ಅವರಿಗೆ ಬೆಳ್ಳಿ ಪದಕ ಒಲಿದಿತ್ತು. ಭಾರತ ಪದಕಪಟ್ಟಿಯಲ್ಲಿ ಸದ್ಯ 11 ಪದಕಗಳೊಂದಿಗೆ (ನಾಲ್ಕು ಚಿನ್ನ, ಐದು ಬೆಳ್ಳಿ, ಎರಡು ಕಂಚು) ಅಗ್ರಸ್ಥಾನ ಕಾಪಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT