ಗುರುವಾರ , ಜೂನ್ 30, 2022
24 °C

ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮುಖ್ಯ ಸುತ್ತಿಗೆ ಅಸ್ಮಿತಾ, ಮಾಳವಿಕಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್‌: ಭಾರತದ ಅಸ್ಮಿತಾ ಚಲಿಹಾ ಮತ್ತು ಮಾಳವಿಕಾ ಬನ್ಸೋಡ್ ಅವರು ಥಾಯ್ಲೆಂಡ್‌ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಹಿಳಾ ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅಸ್ಮಿತಾ 21-16, 21-18ರಿಂದ ಅಮೆರಿಕದ ಜೆನ್ನಿ ಗೈ ಅವರನ್ನು ಸೋಲಿಸಿದರೆ, ಮಾಳವಿಕಾ ಅವರು 21-18, 21-8ರಿಂದ ಭಾರತದವರೇ ಆದ ಅನುಪಮಾ ಉಪಾಧ್ಯಾಯ ಅವರನ್ನು ಪರಾಭವಗೊಳಿಸಿದರು.

ಪ್ರಿಯಾಂಶು ರಾಜಾವತ್‌, ಕಿರಣ್ ಜಾರ್ಜ್‌ ಮತ್ತು ಶುಭಂಕರ್ ಡೇ ಅವರು ಮುಖ್ಯ ಸುತ್ತು ಪ್ರವೇಶಸಿಸುವಲ್ಲಿ ವಿಫಲರಾದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು